ಸೇನಾಪಡೆಗಳ ನಿಯೋಜನೆ ಹೆಚ್ಚಳ

December 15, 2020

ನವದೆಹಲಿ ಡಿ.15 : ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಸೇನಾ ಪಡೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ನಮ್ಮ ಸೇನೆಗೆ ಈಗ ಪರೀಕ್ಷೆಯ ಕಾಲ, ಗಡಿಯಲ್ಲಿ ನಿಂತು ಹೋರಾಟ ಮಾಡುವಾಗ ನಮ್ಮ ಸೈನ್ಯ ಅತ್ಯಂತ ಹೆಚ್ಚಿನ ಅನುಕರಣೀಯ ಧೈರ್ಯ, ಸಾಹಸವನ್ನು ತೋರಿಸಿದ್ದಾರೆ. ಚೀನಾ ಸೇನಾಪಡೆಯ ಎದುರು ಭಾರತೀಯ ಸೇನೆ ಧೈರ್ಯದಿಂದ ಹೋರಾಟ ಮಾಡಿದ್ದು ಹಿಂದೆ ಹೋಗುವಂತೆ ಮಾಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಎಫ್‍ಐಸಿಸಿಐಯ 93ನೇ ವಾರ್ಷಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಹಿಮಾಲಯ ಕಣಿವೆಯಲ್ಲಿ ಅಪ್ರಚೋದಿತ ದಾಳಿ ನಡೆಯುತ್ತಿರುವುದು ವಿಶ್ವ ಹೇಗೆ ಬದಲಾಗುತ್ತಿದೆ ಎಂಬುದನ್ನು ನಮಗೆ ತಿಳಿಸಿಕೊಡುತ್ತದೆ. ಗಡಿ ದೇಶದೊಂದಿಗಿನ ಈಗಿನ ಒಪ್ಪಂದಗಳು ಹೇಗೆ ಸವಾಲಾಗಿವೆ, ಹಿಮಾಲಯ ಕಣಿವೆಯಲ್ಲಿ ಮಾತ್ರವಲ್ಲದೆ ಇಂಡೊ-ಫೆಸಿಫಿಕ್ ತೀರದುದ್ದಕ್ಕೂ ಅಧಿಕಾರ ಹೊಂದಲು ಗಡಿ ರಾಷ್ಟ್ರ ಹೇಗೆ ನೋಡುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.
ಈ ವರ್ಷ ಚೀನಾ ಗಡಿಭಾಗದಲ್ಲಿ ನಮ್ಮ ಸೈನ್ಯ ಮೆರೆದ ಸಾಹಸವನ್ನು ಮುಂದಿನ ಜನಾಂಗ ನೋಡಿ ಖುಷಿ ಪಡುತ್ತದೆ. ಗಡಿ ವಾಸ್ತವ ರೇಖೆಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾದಾಗಲೆಲ್ಲ ಭಾರತ ಮತ್ತು ಚೀನಾದ ಮಿಲಿಟರಿ ಶಕ್ತಿಯನ್ನು ಹೋಲಿಕೆ ಮಾಡಲಾಗುತ್ತದೆ ಎಂದರು.

error: Content is protected !!