ಕೊಡಗು ಜಿಲ್ಲಾ ದಾರಿಮಿ ಅಸೋಸಿಯೇಷನ್ ನಿಂದ ಶಂಸುಲ್ ಉಲಮಾ ಅನುಸ್ಮರಣೆ

December 15, 2020

ಮಡಿಕೇರಿ ಡಿ. 15 : ವಿಶ್ವಕಂಡ ಮಹಾವಿದ್ವಾಂಸ ಶಂಸುಲ್ ಉಲಮಾ ಇ.ಕೆ ಅಬೂಬಕರ್ ಮುಸ್ಲಿಯಾರ್ (ಖ ಸಿ) ಇವರ ಅನು ಸ್ಮರಣಾ ಕಾರ್ಯಕ್ರಮವು ಸುಂಟಿಕೊಪ್ಪ ಎಸ್ಎಂಎಸ್ ಅರಬಿಕ್ ಕಾಲೇಜಿನಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಬ್ದುಲ್ಲಾ ಫೈಝಿ, ಶಂಸುಲ್ ಉಲಮಾ ಪ್ರಪಂಚ ಕಂಡ ಅತೀ ಶ್ರೇಷ್ಠ ವಿದ್ವಾಂಸರಾಗಿದ್ದರು. ಆದ್ದರಿಂದಲೇ ಅವರಿಗೆ ಅರಬಿ ಉಲಮಾ ಒಕ್ಕೂಟ ಶಂಸುಲ್ ಉಲಮಾ ಎಂಬ ಬಿರುದನ್ನು ಕೊಟ್ಟು ಗೌರವಿಸಿದರು. ಅವರ ಕಾಲದಲ್ಲಿ ಅಥವಾ ಅನಂತರ ಅವರಂತ ಶ್ರೇಷ್ಠ ವಿದ್ವಾಂಸರನ್ನು ಪ್ರಪಂಚ ಕಂಡಿಲ್ಲ ಎಂದು ಖಾಸಿ ಅಭಿಪ್ರಾಯಪಟ್ಟರು. ಅವರ ಆದರ್ಶ ಸಿದ್ಧಾಂತವನ್ನು ಇವತ್ತಿನ ಉಲಮಾಗಳು, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಬ್ದುಲ್ಲಾ ಫೈಝಿ ಕರೆ ನೀಡಿದರು.

ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ದಾರಿಮಿ ಅಸೋಸಿಯೇಷನ್ ಅಧ್ಯಕ್ಷ ಸೂಫಿ ದಾರಿಮಿ ಉದ್ಘಾಟಿಸಿದರು.

ಸಮಾರಂಭದಲ್ಲಿ ಉಸ್ಮಾನ್ ಫೈಜಿ ಸುಂಟಿಕೊಪ್ಪ, ಹಸೈನಾರ್ ಫೈಜಿ ಶನಿವಾರಸಂತೆ, ಇಕ್ಬಾಲ್ ಮೌಲವಿ, ಮಾಹಿನ್ ದಾರಿಮಿ, ಹಮೀದ್ ದಾರಿಮಿ, ಸಿಎಂ ಹಮೀದ್ ಮೌಲವಿ, ಸುಂಟಿಕೊಪ್ಪ ಹಂಸ ಹಾಜಿ ಕುಶಾಲನಗರ, ಹಮೀದ್ ಬೆಟ್ಟಗೇರಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ತಮ್ ಲೀಕ್ ದಾರಿಮಿ ಸ್ವಾಗತಿಸಿದರು.

error: Content is protected !!