ವಿಶೇಷ ಘಟಕ ಯೋಜನೆಯಡಿ ಧನಸಹಾಯಕ್ಕೆ ಅರ್ಜಿ ಆಹ್ವಾನ

15/12/2020

ಮಡಿಕೇರಿ ಡಿ.15 : ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ 2020-21ನೇ ಸಾಲಿನ ಸಾಮಾನ್ಯ, ಗಿರಿಜನ ಉಪಯೋಜನೆ ಹಾಗೂ ವಿಶೇಷ ಘಟಕ ಯೋಜನೆಯಡಿ ಧನಸಹಾಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2019-20ನೇ ಸಾಲಿನಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಗೀತ, ಜನಪದ, ನೃತ್ಯ, ನಾಟಕ ಸೇರಿದಂತೆ ಇತರೆ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ನೋಂದಾಯಿತ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅಸಂಘಟಿತ ತಂಡಗಳು/ ಏಕವ್ಯಕ್ತ ಕಲಾವಿದರಿಗೆ ವಾದ್ಯ ಪರಿಕರ/ ವೇಷಭೂಷಣ ಖರೀಧಿಗೆ ಹಾಗೂ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಏಕವ್ಯಕ್ತಿ/ ತಂಡದ ಕಲಾವಿದರಿಗೆ ಕಲಾಕೃತಿಗಳ ಪ್ರದರ್ಶನಗಳಿಗೆ ಧನ ಸಹಾಯ ನೀಡಲಾಗುವುದು.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 27 ರ ವರೆಗೆ ಸೇವಾ ಸಿಂಧು ಪೋರ್ಟಲ್ sevasindhu.karnataka.gov.in ನಲ್ಲಿ ಹಾಗೂ www.kannadasiri.karnataka.gov.in ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಸಬಹುದು. ಹೆಚ್ಚಿನ ಮಾಹಿತಿಗೆ 080-22230282/ 080-2279954 ಗೆ ಸಲ್ಲಿಸಬಹುದಾಗಿದೆ.