ಗ್ರಾ.ಪಂ.ಮೊದಲ ಹಂತದ ಚುನಾವಣೆಯ ಕಣದಲ್ಲಿ 2165 ಮಂದಿ

15/12/2020

ಮಡಿಕೇರಿ ಡಿ.15 : ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಅಂತಿಮವಾಗಿ 2,165 ಮಂದಿ ಕಣದಲ್ಲಿದ್ದಾರೆ.
ಈ ಹಿನ್ನೆಲೆ ಮಡಿಕೇರಿ ತಾಲ್ಲೂಕಿನ 26 ಗ್ರಾಮ ಪಂಚಾಯಿಗಳಲ್ಲಿ 295 ಸ್ಥಾನಗಳಲ್ಲಿ 4 ಮಂದಿ ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿವೆ. 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 267 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 676 ಮಂದಿ ಅಂತಿಮವಾಗಿ ಕಣದಲ್ಲಿದ್ದಾರೆ.
ಹಾಗೆಯೇ ಸೋಮವಾರಪೇಟೆ ತಾಲ್ಲೂಕಿನ 40 ಗ್ರಾಮ ಪಂಚಾಯಿತಿಗಳಲ್ಲಿ 483 ಸ್ಥಾನಗಳಲ್ಲಿ ನಾಮಪತ್ರ ಸಲ್ಲಿಸದೆ 2 ಸ್ಥಾನಗಳು ಖಾಲಿ ಉಳಿದಿದ್ದು, 18 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 463 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1,489 ಮಂದಿ ಅಂತಿಮವಾಗಿ ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.