ಡಿ. 20 ರಂದು ಕುಶಾಲನಗರ ಮಾವೇಲಿ ಸಹಕಾರ ಸಂಘದ ವಾರ್ಷಿಕ ಮಹಾಸಭೆ

December 15, 2020

ಕುಶಾಲನಗರ ಡಿ.15 : ಕುಶಾಲನಗರ ಮಾವೇಲಿ ಸಹಕಾರ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ಡಿಸೆಂಬರ್ 20 ರಂದು ಭಾನುವಾರ ಇಂದಿರಾ ಬಡಾವಣೆಯ ಕೇರಳ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎ.ಕೆ.ವೇಣು ಹೇಳಿದರು.
ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಸಭೆಗೆ ಮುನ್ನ ಇಂದಿರಾ ಬಡಾವಣೆಯಲ್ಲಿ ಸಂಘದ ನೂತನ ಕಚೇರಿಯನ್ನು ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯನ್ ಉದ್ಘಾಟಿಸುವರು. ನಂತರ 11 ಗಂಟೆಗೆ ಮಹಾಸಭೆ ನಡೆಯಲಿದೆ ಎಂದು ತಿಳಿಸಿದರು. ಕಳೆದ ಐದು ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಂಘ ಒಟ್ಟು 328 ಸದಸ್ಯರನ್ನು ಹೊಂದಿದ್ದು ಸಹಕಾರ ಸಂಘದ ಪಾಲು ಬಂಡವಾಳ, ನಿರಖು ಠೇವಣಿ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಹೊಸದಾಗಿ ಸದಸ್ಯತ್ವ ನೋಂದಾವಣೆಗೆ ಚಾಲನೆ ನೀಡಲಾಗುತ್ತದೆ. ಹಿಂದಿನ ಸಾಲಿನ ವಾರ್ಷಿಕ ವರದಿ ಅಂಗೀಕಾರ, 2019-20ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಅಂಗೀಕಾರ, 2020-21ನೇ ಸಾಲಿನ ತಾತ್ಕಾಲಿಕ ಬಜೆಟ್ ಮಂಜೂರು ಮಾಡುವುದು, ಮುಂಬರುವ ವರ್ಷಕ್ಕಾಗಿ ಸಮಿತಿ ತಯಾರಿಸಿದ ಸಂಘದ ಚಟುವಟಿಕೆಗಳ ಕಾರ್ಯಕ್ರಮದ ಅನುಮೋದನೆ ಸೇರಿದಂತೆ ಸದಸ್ಯರು ಲಿಖಿತವಾಗಿ ಮಂಡಿಸಲಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಸಾಲ ಮರು ಪಾವತಿ ಕಾಲಾವಧಿ ವಿಸ್ತರಣೆಯ ಬಗ್ಗೆ, ಬೈಲಾ ತಿದ್ದುಪಡಿ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಕೆ.ಆರ್.ಶಿವಾನಂದ, ಎಂ.ಡಿ.ರಂಜಿತ್ ಇದ್ದರು.

error: Content is protected !!