ಗ್ರಾ.ಪಂ ಚುನಾವಣೆ : ಸೋಮವಾರಪೇಟೆಯ 483 ಸ್ಥಾನಗಳಿಗೆ 19 ಮಂದಿ ಅವಿರೋಧ ಆಯ್ಕೆ

15/12/2020

ಸೋಮವಾರಪೇಟೆ ಡಿ.15 : ಸೋಮವಾರಪೇಟೆ ತಾಲೂಕಿನ 40 ಗ್ರಾಮ ಪಂಚಾಯಿತಿಗಳ 462 ಸ್ಥಾನಗಳಿಗೆ 1488 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 483 ಸ್ಥಾನಗಳಿದ್ದು, 19 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. 2 ವಾರ್ಡ್‍ಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮದ ನಿವಾಸಿಗಳು ಸರ್ಕಾರದ ನಿರ್ಲಕ್ಷ್ಯದಿಂದ ಮೂಲಭೂತ ಸೌಕರ್ಯಗಳಿಂದ ಗ್ರಾಮ ವಂಚಿತವಾಗಿದೆ ಎಂದು 2 ವಾರ್ಡ್‍ಗಳಲ್ಲಿ ಮತದಾನ ಬಹಿಷ್ಕರಿಸಿದ್ದಾರೆ.
ಕೂಡುಮಂಗಳೂರು ಗ್ರಾಪಂನ 24 ಸ್ಥಾನಗಳಿಗೆ ಹಾಗು ಸುಂಠಿಕೊಪ್ಪದ 20 ಸ್ಥಾನಗಳಿಗೆ ಅತೀಹೆಚ್ಚಿನ ತಲಾ 87 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗರ್ವಾಲೆ ಗ್ರಾಪಂನ 5 ಸ್ಥಾನಗಳಿಗೆ ಕಡಿಮೆ ಸಂಖ್ಯೆ 14 ಮಂದಿ ಕಣದಲ್ಲಿದ್ದಾರೆ. ಕೆಲ ವಾರ್ಡ್‍ಗಳಲ್ಲಿ ಪರಿಶಿಷ್ಠ ಮಹಿಳೆಯರು ಲಭ್ಯವಿಲ್ಲದ ಕಾರಣ 19 ರಲ್ಲಿ 6 ಮಂದಿ ಪರಿಶಿಷ್ಠ ಪಂಗಡದ ಮಹಿಳೆಯರು ಅವಿರೋಧ ಆಯ್ಕೆಯಾಗಿದ್ದಾರೆ.
ಹಂಡ್ಲಿ ಗ್ರಾಮ ಪಂಚಾಯಿತಿಗೆ ಮಾದೇವಿ (ಪರಿಶಿಷ್ಟ ಪಂಗಡ ಮಹಿಳೆ), ನಿಡ್ತ ಗ್ರಾ.ಪಂ ಬಿ.ಜಿ. ಸುಮಿತ್ರ (ಪ. ಪಂಗಡದ ಮಹಿಳೆ), ತೋಳೂರುಶೆಟ್ಟಳ್ಳಿ ಉಷಾ (ಪ.ಪಂ,ಮಹಿಳೆ), ಚೌಡ್ಲು ದಿವ್ಯ ಕೆ.ಎಸ್.(ಪ.ಪಂ ಮಹಿಳೆ), ಪರಮೇಶ್ ( ಬಿಸಿಎಂ .ಬಿ), ನೇರುಗಳಲೆ ಎಂ.ಎಸ್. ಕವಿತ( ಬಿಸಿಎಂ. ಎ ಮಹಿಳೆ), ಎಚ್. ಕೆ. ವಿನೋದ್‍ಕುಮಾರ್(ಬಿಸಿಎಂ ಬಿ), ಗಣಗೂರು ಗ್ರಾ.ಪಂ ವಿರೂಪಾಕ್ಷ (ಬಿಸಿಎಂ ಬಿ ಸಾಮಾನ್ಯ), ಕೂಡಿಗೆ ಕೆ.ಎಸ್. ಶಿವಕುಮಾರ (ಬಿಸಿಎಂ ಬಿ), ಹೆಬ್ಬಾಲೆ ಎಸ್.ಕೆ. ಕವಿತ( ಬಿಸಿಎಂ ಎ ಮಹಿಳೆ), ಕೊಡಗರಹಳ್ಳಿ ಎಚ್.ಇ.ಅಬ್ಬಾಸ್ (ಸಾಮಾನ್ಯ), ಎನ್.ಬಿ. ನಿರತ ( ಸಾಮಾನ್ಯ ಮಹಿಳೆ). ಹರದೂರು ಎಸ್.ಎನ್. ಸೌಮ್ಯ (ಪ.ಪಂ ಮಹಿಳೆ), ಕುಸುಮ (ಪ ಜಾತಿ ಮಹಿಳೆ), ಮಾದಾಪುರ ಗ್ರಾ.ಪಂ ಬಿ.ಎಸ್. ಭಾರತಿ( ಬಿಸಿಎಂ ಎ ಮಹಿಳೆ), ಎ. ಭಾಗೀರಥಿ ( ಪ.ಪಂ ಮಹಿಳೆ), ಎಂ.ಜಿ. ಸೋಮಣ್ಣ( ಬಿಸಿಎಂ ಬಿ ಸಾಮಾನ್ಯ), ಗರ್ವಾಲೆ ಗ್ರಾ. ಪಂ. ನೇತ್ರಾವತಿ ಬಾಯಿ(ಪ. ಪಂ ಮಹಿಳೆ) ಅವಿರೋಧ ಆಯ್ಕೆಯಾಗಿದ್ದಾರೆ. ಮಸ್ಟರಿಂಗ್, ಡಿ. ಮಸ್ಟರಿಂಗ್ ಕುಶಾಲನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದ್ದು, ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಮತಪೆಟ್ಟಿಗೆಗಳನ್ನು ಸಿದ್ದಪಡಿಸಿದರು.