ಶಬರಿಮಲೆಗೆ ತೆರಳುವವರು ಸರ್ಕಾರದ ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯ…

December 15, 2020

ಕೇರಳ ಡಿ.15 : ಯಾತ್ರಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು. ಕಡಿಮೆ ಸಂಖ್ಯೆಯಲ್ಲಿ ತೀರ್ಥಯಾತ್ರೆ ಕೈಗೊಳ್ಳುವ ಮೂಲಕ ಕೊರೋನಾ ವೇಗವಾಗಿ ಹರಡುವುದನ್ನು ತಪ್ಪಿಸಬಹುದು.

*ಯಾತ್ರಿಕರು ಆಗಾಗ್ಗೆ ಕೈ ತೊಳೆಯಬೇಕು, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು. ಮಾಸ್ಕ್ ಗಳನ್ನು ಖಡ್ಡಾಯವಾಗಿ ಧರಿಸಬೇಕು. ಪ್ರಯಾಣದ ಸಮಯದಲ್ಲಿಯೂ ಮುನ್ನೆಚ್ಚರಿಕೆ ವಹಿಸಬೇಕು. ತೀರ್ಥಯಾತ್ರೆಯುದ್ದಕ್ಕೂ ಸ್ಯಾನಿಟೈಸರ್ ಅನ್ನು ಜೊತೆಯಲ್ಲಿ ಇಟ್ಟುಕೊಂಡಿರಬೇಕು.  

*ಈ ಹಿಂದೆ ಕೊರೋನಾ ತುತ್ತಾಗಿ ಚೇತರಿಸಿಕೊಂಡಿರುವ ಭಕ್ತರು ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ ಮತ್ತು ವಾಸನೆ ಕಳೆದುಕೊಳ್ಳುವಂತಹ ಲಕ್ಷಣಗಳು ಇರುವವರು ತೀರ್ಥಯಾತ್ರೆ ಕೈಗೊಳ್ಳಬಾರದು.

* ಡಿಸೆಂಬರ್ 26 ರಿಂದ ‘ಮಂಡಲ ಮಾಸಾ ಪೂಜೆ’ ನಂತರ ಆಗಮಿಸುವ ಯಾತ್ರಾರ್ಥಿಗಳಿಗೆ ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ.

* ಭಕ್ತರು ಆಗಮನಕ್ಕೆ 24 ಗಂಟೆಗಳ ಮೊದಲು ಪಡೆದ ಕೊರೋನಾ ನೆಗೆಟಿವ್ ಪ್ರಮಾಣಪತ್ರಗಳನ್ನು ಹಾಜರುಪಡಿಸಬೇಕು. ಇದು ಆರ್‌ಎಟಿ-ಪಿಸಿಆರ್, ಆರ್‌ಟಿ-ಲ್ಯಾಂಪ್ ಅಥವಾ ಎಕ್ಸ್‌ಪ್ರೆಸ್ ನ್ಯಾಟ್ ಪರೀಕ್ಷಾ ಫಲಿತಾಂಶವಾಗಿರಬಹುದು.

* ಶಬರಿಮಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾದ ಎಲ್ಲಾ ಅಧಿಕಾರಿಗಳು ಆರ್‌ಟಿ-ಪಿಸಿಆರ್ ಅಥವಾ ಆರ್‌ಟಿ-ಲ್ಯಾಂಪ್ ಅಥವಾ ಎಕ್ಸ್‌ಪ್ರೆಸ್ ನ್ಯಾಟ್ ಪರೀಕ್ಷೆಗೆ ಒಳಗಾಗಬೇಕು.

* ಭಕ್ತರು ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳು ಪ್ರತಿ 30 ನಿಮಿಷಗಳಿಗೊಮ್ಮೆ ಕೈ ತೊಳೆಯಬೇಕು ಅಥವಾ ಸ್ಯಾನಿಟೈಸರ್ ಬಳಸಬೇಕು.

* ಕನಿಷ್ಠ 6 ಅಡಿಗಳ ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ಮಾಸ್ಕ್ ಅನ್ನು ಸರಿಯಾಗಿ ಧರಿಸಬೇಕು.

* ಕೊರೋನಾದಿಂದ ಚೇತರಿಸಿಕೊಂಡಿರುವ ಅಯ್ಯಪ್ಪನ ಭಕ್ತರು ತೀರ್ಥಯಾತ್ರೆಗೆ ತೆರಳುವ ಮೊದಲು ದೈಹಿಕ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಬೇಕು.

* ಪಂಪಾ ಮತ್ತು ನೀಲಕ್ಕಲ್ನಲ್ಲಿ ಜನಸಂದಣಿಗೆ ಅವಕಾಶವಿಲ್ಲ. ಬಳಕೆಯ ನಂತರ ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು. ಗುಂಪು ಗುಂಪಾಗಿ ಬೆಟ್ಟವನ್ನು ಇಳಿಯಬಾರದು.

* ಯಾತ್ರಾರ್ಥಿಗಳ ಜೊತೆಯಲ್ಲಿ ಚಾಲಕರು, ಕ್ಲೀನರ್‌ಗಳು ಮತ್ತು ಅಡುಗೆಯವರು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

error: Content is protected !!