ರಾಜ್ಯ ಸರ್ಕಾರಗಳಿಗೆ ಸುಪ್ರೀಂ ನೋಟಿಸ್

December 16, 2020

ನವದೆಹಲಿ ಡಿ.15 : ಮಕ್ಕಳ ಆರೈಕೆ ಕೇಂದ್ರಗಳಿಗೆ (ಸಿಸಿಐ) ಅಗತ್ಯ ಮೂಲಸೌಕರ್ಯಗಳು, ಸ್ಟೇಷನರಿ ವಸ್ತುಗಳು, ಪುಸ್ತಕಗಳು ಮತ್ತು ಇತರ ಉಪಕರಣಗಳನ್ನು ಮುಂದಿನ 30 ದಿನಗಳ ಒಳಗೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುತ್ತದೆ. ಈ ಮೂಲಕ ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಹೇಮಂತ್ ಗುಪ್ತಾ ಮತ್ತು ಅಜಯ್ ರಾಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠ ಮಿಕಸ್ ಕ್ಯೂರಿ ಅಡ್ವೊಕೇಟ್ ಗೌರವ್ ಅಗರ್ವಾಲ್ ಅವರ ಸಲಹೆಗಳನ್ನು ಸ್ವೀಕರಿಸಿದ ನಂತರ “ಇನ್ ರಿ ಕಾಂಟ್ಯಾಜಿಯನ್ ಆಫ್ ಕೋವಿಡ್19 ವೈರಸ್ ಇನ್ ಚಿಲ್ಡ್ರನ್ ಪೆÇ್ರಟೆಕ್ಷನ್ ಹೋಮ್ಸ್” ಎಂಬ ಸುಯೊ ಮೋಟೋ ಪ್ರಕರಣಕ್ಕೆ ಸಂಬಂಧಿಸಿ ಈ ನಿರ್ದೇಶನಗಳನ್ನು ನೀಡಿತು.
ಇಂದಿನಿಂದ 30 ದಿನಗಳ ಅವಧಿಯಲ್ಲಿ ಜಿಲ್ಲಾ ಮಕ್ಕಳ ಆರೈಕೆ ಕೇಂದ್ರಗಳು (ಡಿಸಿಪಿಯು) ನೀಡಿದ ಶಿಫಾರಸುಗಳ ಆಧಾರದ ಮೇಲೆ ಆನ್‍ಲೈನ್ ತರಗತಿಗಳಿಗೆ ಅಗತ್ಯವಾದ ಮೂಲಸೌಕರ್ಯ, ಪುಸ್ತಕಗಳು, ಲೇಖನ ಸಾಮಗ್ರಿಗಳು,ಮತ್ತು ಇತರ ಉಪಕರಣಗಳನ್ನು ಒದಗಿಸಿ ಎಂದು ಹೇಳಿದೆ.

error: Content is protected !!