ಶ್ರೀರವಿಶಂಕರ್ ಗುರೂಜಿಗೆ ಕಾಯಕ ಶ್ರೀ’ ಪ್ರಶಸ್ತಿ

December 16, 2020

ಗೋಕಾಕ ಡಿ.16 : ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಧ್ಯಕ್ಷ ಶ್ರೀಶ್ರೀರವಿಶಂಕರ್ ಗುರೂಜಿ ಅವರನ್ನು ಗೋಕಾಕದ ಶೂನ್ಯ ಸಂಪಾದನಾ ಮಠ ನೀಡಲಿರುವಕಾಯಕ ಶ್ರೀ’ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ.
ಲೈಂಗೈಕ್ಯ. ಬಸವ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಅಂಗವಾಗಿ 16ನೇ ಶರಣ ಸಂಸ್ಕೃತಿ ಉತ್ಸವ ಫೆ.1ರಿಂದ 4 ರವರೆಗೆ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ನೆರವೇರಲಿದ್ದು ಈ ವೇಳೆ ಉತ್ಸವದ ಮೊದಲ ದಿನ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ. ಪ್ರಶಸ್ತಿಯು 1 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.
ಕಳೆದ ವರ್ಷ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಹಾಗೂ ಭಾರತದ ಕ್ಷಿಪಣಿ ಮಹಿಳೆ ಡಾ. ತೆಸ್ಸಿ ಥಾಮಸ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

error: Content is protected !!