ಕೊಳಗದಾಳುವಿನ ಪಾಕದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ದುರ್ಗಾ ಪರಮೇಶ್ವರಿ ಉತ್ಸವ

December 16, 2020

ಮಡಿಕೇರಿ ಡಿ. 16 : ಧನುರ್ ಮಾಸ ಆರಂಭವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಉತ್ಸವಗಳು ಆರಂಭವಾಗಿದ್ದು, ಕೊಳಗದಾಳುವಿನ ಪಾಕದಲ್ಲಿ ಶ್ರದ್ಧಾಭಕ್ತಿಯಿಂದ ಶ್ರೀ ದುರ್ಗಾ ಪರಮೇಶ್ವರಿ ಉತ್ಸವ ನಡೆಯಿತು.
ಕೊಳಗದಾಳುವಿನ ಪಾಕ ದುರ್ಗಪರಮೇಶ್ವರಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ತಕ್ಕಮುಖ್ಯಸ್ಥರು ಪಾಕ ಹೊಳೆಯಲ್ಲಿ ಸ್ನಾನ ಮಾಡಿ ಗಂಗಪೂಜೆ ಬಳಿಕ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.
ಬಳಿಕ ಮುಕ್ಕಾಟಿಯ ದೊಡ್ಡ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ದುಡಿಕೊಟ್ಟುವಿನೊಂದಿಗೆ ತಂದು ಪ್ರದಕ್ಷಿಣೆ ಹಾಕಲಾಯಿತು. ಮಹಾಪೂಜೆ ಬಳಿಕ ಹೊಸ ಅಕ್ಕಿ ಹಾಕಿ ಮಾಡಿದ ಪಾಯಸವನ್ನು ಪ್ರಸಾದದ ಮೂಲಕ ನೀಡಲಾಗುತ್ತದೆ.
ಇಲ್ಲಿನ ವಿಶೇಷತೆ : ಈ ದೇವಾಲಯದಲ್ಲಿ ಹರಕೆ ಹರಿಸಿಕೊಂಡರೆ ಈಡೇರುವ ನಂಬಿಕೆ ಹಿಂದಿನಿಂದಲೂ ಇದೆ. ಪಾಕ ಹೊಳೆಯಲ್ಲಿ ಹಲವು ಪವಿತ್ರ ದೇವರ ಮೀನುಗಳಿದ್ದು, ಅದಕ್ಕೆ ಅಕ್ಕಿ, ಪುರಿ ಅರ್ಪಿಸಿ ತಮ್ಮ ಬೇಡಿಕೆ ಈಡೇರುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ.
ಈ ಮೀನುಗಳನ್ನು ಹಿಡಿದಲ್ಲಿ ಅಂತಹವರಿಗೆ ಆಪತ್ತು ಸಂಭವಿಸಲಿದೆ ಎಂಬ ಪ್ರತೀತಿ ಹಿಂದಿನಿಂದಲೂ ಬಂದಿರುವುದರಿಂದ ಅದರ ಗೋಜಿಗೆ ಹೋಗುವುದಿಲ್ಲ.

error: Content is protected !!