ರುಚಿಕರವಾದ ಗ್ರಿಲ್ಡ್ ಚಿಕನ್ ಮಾಡುವ ವಿಧಾನ

December 16, 2020

ಬೇಕಾಗುವ ಸಾಮಾಗ್ರಿಗಳು: ಒಂದು ಅಥವಾ ಒಂದೂವರೆ ಕೆಜಿ ಚಿಕನ್, ಸ್ವೀಟ್ ವಿನಿಗರ್ 2 ಚಮಚ, ಬೆಳ್ಳುಳ್ಳಿ 7-8 ಎಸಳು, ಸಾಸಿವೆ 1 ಚಮಚ, ಏಲಕ್ಕಿ ಪುಡಿ 1 ಚಮಚ, ರುಚಿಗೆ ತಕ್ಕ ಉಪ್ಪು, 1 ಚಮಚ ನಿಂಬೆ ರಸ, ಕೆಂಪು ಮೆಣಸಿನ ಪುಡಿ 1 ಚಮಚ, ಕರಿಮೆಣಸಿನ ಪುಡಿ 1 ಚಮಚ

ಚಿಕನ್ ತಯಾರಿಸುವ ವಿಧಾನ: ಚಿಕನ್ ಕತ್ತರಿಸಿ ಅದನ್ನು ಚೆನ್ನಾಗಿ ತೊಳೆಯಬೇಕು. ನಂತರ ಅದರಲ್ಲಿರುವ ನೀರು ಹೋಗಲು ನೀರು ಸೋಸಿ ಹೋಗುವಂತಹ ಪಾತ್ರೆಯಲ್ಲಿ ಹಾಕಬೇಕು. ಚಿಕನ್‌ಗೆ ಉಪ್ಪು ಹಾಕಿ ಒಂದು ಗಂಟೆವರೆಗೆ ಇಡಬೇಕು. ಈಗ ವಿನಿಗರ್ ಹಾಕಿ ಮಿಶ್ರ ಮಾಡಬೇಕು. ಸಣ್ಣ ಬಟ್ಟಲಿನಲ್ಲಿ ಜೇನು ಮತ್ತು ಕೆಂಪು ವೈನ್ ಮಿಶ್ರ ಮಾಡಿಡಬೇಕು. ಚಿಕನ್‌ಗೆ ಬೆಳ್ಳುಳ್ಳಿ, ಚಕ್ಕೆ, ಏಲಕ್ಕಿ ಪುಡಿ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಈಗ ಈ ಮಿಶ್ರಣಕ್ಕೆ ಜೇನು ಮತ್ತು ವೈನ್ ಮಿಶ್ರಣವನ್ನು ಹಾಕಿ ಮಿಶ್ರ ಮಾಡಬೇಕು. ಅದರ ಮೇಲೆ ಸಾಸಿವೆಯನ್ನು ಉದುರಿಸಬೇಕು. ಮೈಕ್ರೋವೇವ್ ಅನ್ನು 300 ಡಿಗ್ರಿ ಫ್ಯಾರನ್ಹೀಟ್ ಉಷ್ಣತೆಗೆ ಬಿಸಿ ಮಾಡಿ 15-20 ನಿಮಿಷ ಗ್ರಿಲ್ ಮಾಡಬೇಕು. ನಂತರ ಮೈಕ್ರೋವೇವ್ ಆಫ್ ಮಾಡಿ 10 ನಿಮಿಷದ ಬಳಿಕ ತೆಗೆಯಬೇಕು. ನಂತರ ನಿಂಬೆ ರಸ ಹಿಂಡಿದರೆ ರುಚಿಕರವಾದ ಗ್ರಿಲ್ಡ್ ಚಿಕನ್ ರೆಡಿ.

error: Content is protected !!