ಬಂದೂಕು ಕೊಡವರ ಧಾರ್ಮಿಕ, ಸಾಂಸ್ಕೃತಿಕ ಲಾಂಛನ : ರಾಜ್ಯಾಂಗ ಖಾತ್ರಿಗೆ ಎನ್.ಯು.ನಾಚಪ್ಪ ಒತ್ತಾಯ

16/12/2020

ಮಡಿಕೇರಿ ಡಿ.16 : ಕೊಡವ ಬುಡಕಟ್ಟು ಕುಲದ ಗರ್ಭಗುಡಿಯಂತ್ತಿರುವ `ನೆಲ್ಲಕ್ಕಿ’ಯಡಿಯಲ್ಲಿ ಪ್ರಧಾನ ಸ್ಥಾನ ಪಡೆದಿರುವ ಬಂದೂಕು ಕೊಡವರ ಧಾರ್ಮಿಕ ಮತ್ತು ಸಾಂಸ್ಕøತಿಕ ಲಾಂಛನವಾಗಿದ್ದು, ಸರ್ಕಾರ ಇದನ್ನು ಮಾನ್ಯ ಮಾಡಿ ಗೌರವದ ಸ್ಥಾನಮಾನ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವ ಬುಡಕಟ್ಟು ಕುಲದ ನಾಗರೀಕತೆ ಉಗಮವಾದಂದಿನಿಂದಲೂ ಆಯುಧಗಳು ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇದರ ಹಕ್ಕು ಮತ್ತು ರಕ್ಷಣೆ ಅಬಾಧಿತವಾಗಿ ಮುಂದುವರೆಯಲು ರಾಜ್ಯಾಂಗ ಖಾತ್ರಿಯಾಗಬೇಕೆಂದು ಹೇಳಿದ್ದಾರೆ.
ವಿಶ್ವ ಅಲ್ಪಸಂಖ್ಯಾತ ಜನಾಂಗದ ಹಕ್ಕುಗಳ ದಿನಾಚರಣೆ ಅಂಗವಾಗಿ ಡಿ.18 ರಂದು ನಾಪೆÇೀಕ್ಲುವಿನ ಕೊಳಕೇರಿಯಲ್ಲಿ ‘ತೋಕ್ ನಮ್ಮೆ’(ಗನ್ ಕಾರ್ನಿವಲ್) ನಡೆಯಲಿದೆ ಎಂದು ತಿಳಿಸಿದ್ದಾರೆ.
ಕೊಡವ ಬುಡಕಟ್ಟು ಕುಲದ ನಾಗರಿಕತೆ ಉಗಮವಾದಂದಿನಿಂದಲೂ ಆಯುಧಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅದೊಂದು ಪರಂಪರೆಯಾಗಿಯೂ, ಜೀವನ ವಿಧಾನವಾಗಿಯೂ ಮುಂದುವರೆದಿzದೆ. ಇದರ ಹಕ್ಕು ಮತ್ತು ರಕ್ಷಣೆ ಅಬಾಧಿತವಾಗಿ ಮುಂದುವರೆಯಲು ರಾಜ್ಯಾಂಗ ಖಾತ್ರಿಗಾಗಿ ಹಲವು ಮಹತ್ವದ ನಿರ್ಣಯಗಳನ್ನು ತೋಕ್ ನಮ್ಮೆ ಸಂದರ್ಭ ಅಂಗೀಕರಿಸಲಾಗುವುದು ಎಂದು ನಾಚಪ್ಪ ತಿಳಿಸಿದ್ದಾರೆ.
ಡಿ.18ರ ಪೂರ್ವಾಹ್ನ 10.30 ಗಂಟೆಗೆ ಕೊಳಕೇರಿಯ ಅಪ್ಪಚ್ಚಿರ ರಮ್ಮಿ ನಾಣಯ್ಯ ಅವರ ಕಾವೇರಿ ಎಸ್ಟೇಟ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಆರಂಭದಲ್ಲಿ ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಬಂದೂಕು ಕುರಿತಾದ ತೋಕ್‍ಪಾಟ್ (ಕೋವಿ ಹಾಡು)ನೊಂದಿಗೆ ಬಂದೂಕಿಗೆ ಸಾಮೂಹಿಕ ಪೂಜೆ ನೆರವೇರಿಸಲಾಗುವುದು. ನಂತರ ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ತೆಂಗಿನಕಾಯಿಗೆ ಗುರಿಯಿಟ್ಟು ಗುಂಡು ಹೊಡೆಯುವ ಸ್ಪರ್ಧೆ ಜರುಗಲಿದೆ. ಸ್ಪರ್ಧೆಯ ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಅತ್ಯುತ್ತಮ ಗುರಿಕಾರ ಮಹಿಳೆ ಮತ್ತು ಪುರುಷರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.