ಮಾ.12ರಿಂದ ಅಂಬಟ್ಟಿ ಮೊಕಾಂ ಉರೂಸ್

16/12/2020

ಮಡಿಕೇರಿ ಡಿ.16 : ವರ್ಷಂಪ್ರತಿ ಆಚರಿಸಲಾಗುವ ವಿರಾಜಪೇಟೆ ಅಂಬಟ್ಟಿ ಮೊಕಾಂ ಉರೂಸ್ ಅನ್ನು ಮುಂದಿನ ಮಾ.12ರಿಂದ 16 ರವರೆಗೆ ನಡೆಸಲು ಅಂಬಟ್ಟಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ತೀರ್ಮಾನಿಸಿದೆ.
5 ದಿನಗಳ ಕಾಲ ನಡೆಯುವ ಉರೂಸ್ ನಲ್ಲಿ ಧಾರ್ಮಿಕ ಪ್ರಭಾಷಣ, ಸಾರ್ವಜನಿಕ ಸಮ್ಮೇಳನ ಸೇರಿದಂತೆ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಕೋವಿಡ್-19 ನಿರ್ಬಂಧದ ಎಲ್ಲಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಉರೂಸ್ ಅನ್ನು ಆಯೋಜಿಸಲಾಗುವುದು ಎಂದು ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.