ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷರಾಗಿ ವನಿತ್ ಕುಮಾರ್ ಪುನರಾಯ್ಕೆ

ಮಡಿಕೇರಿ ಡಿ.16 : ಭಾರತೀಯ ಜೇಸಿಸ್ ನ ವಲಯ 14ರಲ್ಲಿರುವ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷರಾಗಿ ರಾಜ್ಯಶಾಸ್ತ್ರ ಉಪನ್ಯಾಸಕ ಎಂ.ಎನ್.ವನಿತ್ ಕುಮಾರ್ ಅವರು ಅವಿರೋಧವಾಗಿ ಪುನರ್ ಆಯ್ಕೆಗೊಂಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕೋವಿಡ್-19ರ ನಿರ್ಬಂಧದಿಂದಾಗಿ ಉದ್ದೇಶಿತ ಕಾರ್ಯ ಯೋಜನೆಗಳನ್ನು ನಡೆಸಲು ಸಾಧ್ಯವಾಗದ ಕಾರಣ 2020ನೇ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ವನಿತ್ ಕುಮಾರ್ ಅವರ ನೇತೃತ್ವದ ಘಟಕಾಡಳಿತ ಮಂಡಳಿಯನ್ನು 2021ಸಾಲಿಗೂ ಮುಂದುವರಿಸುವಂತೆ ಒಮ್ಮತದಿಂದ ವಿಶೇಷ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಘಟಕದ ಕಾರ್ಯದರ್ಶಿಯಾಗಿ ಎ.ಪಿ.ದಿನೇಶ್(ದಿನು) ಹಾಗೂ ಕೋಶಾಧಿಕಾರಿಯಾಗಿ ಕುಪ್ಪಂಡ ದಿಲನ್ ಅವರನ್ನು ಸಭೆ ಅವಿರೋಧವಾಗಿ ಪುನರಾಯ್ಕೆಗೊಳಿಸಿತು.
ಉಳಿದಂತೆ ಘಟಕಾಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಎಚ್.ಆರ್. ಸತೀಶ್ (ನಿರ್ವಹಣೆ), ಜಿ.ಪಿ. ಸ್ವಾಮಿ (ಕಾರ್ಯಕ್ರಮ), ಪಿ.ಎಂ. ಮೆಹರೂಫ್ (ತರಬೇತಿ), ಎನ್. ಜಿ. ಸುರೇಶ್ (ಅಭಿವೃದ್ಧಿ ಮತ್ತು ಬೆಳವಣಿಗೆ), ಜಂಟಿ ಕಾರ್ಯದರ್ಶಿಯಾಗಿ ಎಂ.ಬಿ. ನೀತ್ ಅಯ್ಯಪ್ಪ, ನಿರ್ದೇಶಕರುಗಳಾಗಿ ಕ್ಯಾ. ಬಿ.ಎಂ. ಗಣೇಶ್, ಎಂ.ಎಸ್. ಸರ್ಫುದ್ದೀನ್, ಪಿ.ಪಿ. ಬಿದ್ದಪ್ಪ ಮತ್ತು ಶಿವಕುಮಾರ್ ಅವರನ್ನು ಪುನರಾಯ್ಕೆಗೊಳಿಸಲಾಯಿತು. ಘಟಕದ ಜೇಸಿರೇಟ್ ವಿಭಾಗದ ಮುಖ್ಯಸ್ಥರಾಗಿ ಕೆ. ಜಸ್ಮಿ ಬೋಪಣ್ಣ ಹಾಗೂ ಜೂನಿಯರ್ ಜೇಸಿ ವಿಭಾಗದ ಮುಖ್ಯಸ್ಥರಾಗಿ ಎ.ಡಿ. ಚರಣ್ ಚಂಗಪ್ಪ ಅವರನ್ನು ಸಹ ಇದೇ ಸಂದರ್ಭದಲ್ಲಿ ಪುನರ್ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಘಟಕದ ಸ್ಥಾಪಕಾಧ್ಯಕ್ಷ ರಫೀಕ್ ತೂಚಮಕೇರಿ, ಪೂರ್ವಾಧ್ಯಕ್ಷ ಬಿ.ಈ.ಕಿರಣ್, ಎ.ಎಸ್.ಟಾಟು ಮೊಣ್ಣಪ್ಪ, ಮುಕ್ಕಾಟಿರ ಸಂದೀಪ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.
