ಆನ್‍ಲೈನ್ ಕಲಿಕೆ ಎಂಬ ಯಶಸ್ಸಿನ ದಿಕ್ಕು : 10 ಪ್ರಮುಖ ಅನುಕೂಲಗಳು

December 16, 2020

ಸಾಂಪ್ರದಾಯಿಕ ಕಾಲೇಜುಗಳು, ವಿವಿಗಳು, ಟ್ಯೂಷನ್ ತರಗತಿಗಳು ಇಂದು ಬಜೆಟ್ ಸಮಸ್ಯೆಯನ್ನು ಎದುರಿಸುತ್ತಿವೆ. ಕಾರಣ ವಿದ್ಯಾರ್ಥಿಗಳು ಕಲಿಯುವ ಆಸಕ್ತಿಗಳು ಹೊಸತನಕ್ಕೆ ತೆರೆದು ಕೊಳ್ಳುತ್ತಿರುವುದು. ಎಲ್ಲಾ ನೂತನ ಕೋರ್ಸ್‍ಗಳನ್ನು ಒಂದೇ ಕಾಲೇಜಿನಲ್ಲಿ ಸಂಸ್ಥೆಗಳಲ್ಲಿ ಬೋಧಿಸಲು ಬಜೆಟ್ ಕಾರಣದಿಂದ ಸಾಧ್ಯವಾಗದ ಮಾತು. ಆದ್ದರಿಂದ ಇಂದು ದಶಲಕ್ಷಕ್ಕೆ ಹತ್ತಿರದಷ್ಟು ವಿದ್ಯಾರ್ಥಿಗಳು ಆನ್‍ಲೈನ್ ಪ್ರೋಗ್ರಾಮ್‍ಗಳಿಗೆ ಎನ್‍ರೋಲ್ ಆಗುತ್ತಿದ್ದಾರೆ.
6 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನಿಷ್ಠ ಒಂದಾದರೂ ಆನ್‍ಲೈನ್ ಡಿಗ್ರಿ ಕೋರ್ಸ್ ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಇಂದು ಆನ್‍ಲೈನ್ ಎಜುಕೇಶನ್ ಉನ್ನತ ಶಿಕ್ಷಣಕ್ಕೆ ಒಂದು ಪರ್ಯಾಯವಾಗಿ ಮಾರ್ಪಾಡುತ್ತಿದೆ. ಫೇಸ್‍ಟು ಫೇಸ್ ಬೋಧನೆಯಷ್ಟೇ ಆನ್‍ಲೈನ್ ಶಿಕ್ಷಣ ಪರಿಣಾಮ ಬೀರುತ್ತಿದೆ. ಆನ್‍ಲೈನ್ ಕೋರ್ಸ್ ತೆಗೆದುಕೊಳ್ಳಲು ಹಲವು ಕಾರಣಗಳಿವೆ. ಆನ್‍ಲೈನ್ ಕೋರ್ಸ್ ಬಗ್ಗೆ 10 ಪ್ರಮುಖ ಅನುಕೂಲಗಳನ್ನು ಇಲ್ಲಿ ನೀಡಲಾಗಿದೆ.

::: ಕಲಿಕಾ ವಾತಾವರಣ ತೃಪ್ತಿದಾಯಕ :::

ಫ್ಯಾಮಿಲಿ ಜೊತೆಯಲ್ಲಿ ಸೇರಬಹುದು, ಫಿಸಿಕಲ್ ಸ್ಟ್ರೆಸ್ ಇರುವುದಿಲ್ಲ, ಉಪನ್ಯಾಸಕರ ಬೋಧನೆಯನ್ನು ಕೇಳುವುದು ಮತ್ತು ಅವರು ನೀಡಿದ ಅಸೈನ್ ಮೆಂಟ್‍ಗಳನ್ನು ಕೇವಲ ಆನ್‍ಲೈಲ್ ಮೂಲಕವೇ ಕಳುಹಿಸಬೇಕಾಗಿರುತ್ತದೆ. ಯಾವುದೇ ಟ್ರಾಫಿಕ್ ಎದುರಿಸುವ ಅಗತ್ಯವಿಲ್ಲ. ಬಹುಬೇಗ ತರಗತಿಗೆ ಹಾಜರಾಗುವ ಅಗತ್ಯವಿಲ್ಲ. ಹೀಗೆ ಹಲವಾರು ರೀತಿಯ ಉಪಯೋಗಗಳು ಇವೆ.

::: ಅನುಕೂಲ ಮತ್ತು ಸಾಮ್ಯತೆ :::

ಆನ್‍ಲೈನ್ ಕೋರ್ಸ್‍ಗಳು, ವಿದ್ಯಾರ್ಥಿಗಳಿಗೆ ಅವರ ಅನುಕೂಲಕ್ಕೆ ತಕ್ಕ ಸಮಯವನ್ನು ಕಲಿಯಲು ನೀಡುತ್ತವೆ. ವಿದ್ಯಾರ್ಥಿಗಳು ತಮಗೆ ಬಿಡುವಾದಾಗ ಕಲಿಯುವ ಅವಕಾಶ ಇರುತ್ತದೆ. ಸ್ಟಡಿ ಮೇಟೀರಿಯಲ್‍ಗಳು ಆನ್‍ಲೈನ್‍ನಲ್ಲಿ ಸದಾಕಾಲ ಕಮಿಟ್‍ಮೆಂಟ್‍ಗಳು ಮತ್ತು ಶಿಕ್ಷಣ ಎರಡನ್ನೂ ಉತ್ತಮವಾಗಿ ಬ್ಯಾಲೆನ್ಸ್ ಮಾಡಬಹುದು.

::: ಹೆಚ್ಚು ಸಂವಹನ ಮತ್ತು ಕೇಂದ್ರಿಕರಿಸುವ ಸಾಮಥ್ರ್ಯ :::

ತರಗತಿಗಳಲ್ಲಿ ಸಂವಹನಕ್ಕೆ ಹೆದರುವ ಸಂಕೋಚ ಪಡುವ ಅವಕಾಶಗಳು ಹೆಚ್ಚು. ಆದರೆ ಆನ್‍ಲೈನ್ ಕೋರ್ಸ್‍ಗಳಲ್ಲಿ ವಿದ್ಯಾರ್ಥಿ ತನ್ನ ಎಲ್ಲಾ ಸಂಶಯಗಳಿಗೆ ಉತ್ತರ ಪಡೆಯಲು, ಉಪನ್ಯಾಸಕರೊಂದಿಗೆ ಯಾವುದೇ ನಿರ್ಬಂಧವಿಲ್ಲದೆ ಮುಕ್ತವಾಗಿ ಇಂಟೆರ್ಯಾಕ್ಷನ್ ಮಾಡುವ ಅವಕಾಶ ಇರುತ್ತದೆ, ಇದು ಸುಲಭವು ಹೌದು.

::: ಕರಿಯರ್ ಪ್ರಗತಿ :::

ವಿದ್ಯಾರ್ಥಿಗಳು ವೃತ್ತಿಪರ ಕೆಲಸಗಳನ್ನು ಮಾಡುತ್ತಾ ಯಾವುದೇ ಡಿಗ್ರಿಗಳನ್ನು ಪಡೆಯಬಹುದು. ಫ್ಯಾಮಿಲಿಗೆ ನೀವೆ ಆಧಾರ ಎಂದಾದಲ್ಲಿ ಆರ್ಥಿಕ ಹೊರೆಯನ್ನು ನೀಗಿಸುತ್ತಾ ಜೊತೆಗೆ ತಮ್ಮ ಕಲಿಕಾ ಆಸಕ್ತಿಗಳನ್ನು ಈಡೇರಿಸುಕೊಳ್ಳಬಹುದು.

::: ವೃತ್ತಿಯಲ್ಲಿ ಮುಂದುವರೆಯಿರಿ :::
ಡಿಗ್ರಿ ಪಡೆಯಲು ಕೆಲಸ ಬಿಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳಿಗೆ ಇಂದು ಕಾಲೇಜು ವೆಚ್ಚಗಳು ಹೆಚ್ಚಾಗುತ್ತಿದೆ. ಇದನ್ನು ಅರಿತ ಕೆಲವು ವಿದ್ಯಾರ್ಥಿಗಳು ಶೈಕ್ಷಣಿಕ ಹಂತದÀಲ್ಲೇ ಆದಾಯ ಕ್ರೋಢೀಕರಣದಲ್ಲೂ ತೊಡಗಿದ್ದಾರೆ.

::: ಪ್ರಯಾಣಕ್ಕೆ ನಿಯಂತ್ರಣ :::

ಸಾಂಪ್ರದಾಯಿಕ ವಿವಿ, ಕಾಲೇಜುಗಳಲ್ಲಿ ಕಲಿಯುವಾಗ ಮಳೆ, ಮಂಜು, ಇತರೆ ಕಾರಣಗಳಿಂದ ಕೆಲವೊಮ್ಮೆ ತರಗತಿಗಳನ್ನು ನಡೆಸಲಾಗುವುದಿಲ್ಲ. ಹಾಗೆ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಕಂಪ್ಲೀಟ್ ಬಂದ್ ಆದಲ್ಲಿ ಶಾಲಾ – ಕಾಲೇಜು ಚಟುವಟಿಕೆಗಳು ಸಂಪೂರ್ಣ ಬಂದ್ ಆಗುತ್ತವೆ.

::: ಟೆಕ್ನಿಕಲ್ ಸ್ಕಿಲ್‍ಗಳ ಅಭಿವೃದ್ಧಿ :::

ಬಂದ್, ಮಳೆಗಾಲ ಇತರೆ ಹಲವು ಸಂದಿಗ್ಧ ಸಮಸ್ಯೆಗಳು ಎದುರಾದಾಗ ಕಾಲೇಜುಗಳಿಗೆ ವಿದ್ಯಾರ್ಥಿಗಳು ಓಡಾಡಲು ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ರಜೆಯನ್ನು ನೀಡಲಾಗುತ್ತದೆ. ಕಲಿಯಬೇಕಾದ ವಿಷಯಗಳನ್ನು ಮುಂದೂಡಲಾಗುತ್ತದೆ ಹೊರತು ಅದನ್ನು ಕಲಿಯುವ ಅಗತ್ಯವೇ ಇಲ್ಲವೆಂದಲ್ಲ. ಆದ್ದರಿಂದ ಇಂತಹ ಸಮಸ್ಯೆಗಳನ್ನು ಸರಿದೂಗಿಸಿಕೊಳ್ಳಲು ತಾಂತ್ರಿಕ ಕೌಶಲ್ಯಗಳು ಅನುವುಮಾಡಿಕೊಡುತ್ತವೆ. ಸ್ಕಿಲ್‍ಗಳ ಆನ್‍ಲೈನ್ ಕೋರ್ಸ್‍ನಲ್ಲಿ ಕರಗತವಾಗುತ್ತದೆ. ಹಾಗೆ ಅಗತ್ಯವು ಹೌದು. ಕಲಿಕೆಯಲ್ಲಿ ನಿರಂತರ ಸಾಧಿಸುವಿಕೆಗೆ ಆನ್‍ಲೈನ್ ಕೋರ್ಸ್‍ಗಳು ಅತ್ಯುಪಯುಕ್ತವಾಗಿದೆ.

ಬರಹ : ದೀಕ್ಷ ಕೆ.ಎನ್ ಮಡಿಕೇರಿ. (94483 84010)

ದೀಕ್ಷ ಕೆ.ಎನ್

error: Content is protected !!