ಸುಂಟಿಕೊಪ್ಪ ಗ್ರಾಮ ಪಂಚಾಯಿತಿ : 20 ಸ್ಥಾನಕ್ಕೆ 87 ಮಂದಿ ಸ್ಪರ್ಧಿಸಿದ್ದಾರೆ

December 16, 2020

ಸುಂಟಿಕೊಪ್ಪ,ಡಿ.16: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಚುನಾವಣೆಗೆ ಕಳೆದ ಸಾಲಿನ ಆಡಳಿತ ಮಂಡಳಿಯ 11 ಮಂದಿ ಸದಸ್ಯರುಗಳು ಮತ್ತೆ ಸ್ಪರ್ಧಾ ಕಣಕ್ಕೆ ದುಮುಕ್ಕಿದ್ದು, ಮತದಾರರು ಇವರನ್ನು ಕೈ ಹಿಡಿಯುತ್ತಾರೊ ಎಂಬ ಕುತೂಹಲ ಮೂಡಿಸಿದೆ.
ಕಳೆದ ಸಾಲಿನ ಮಾಜಿ ಅಧ್ಯಕ್ಷರಾದ ರೋಸ್‍ಮೇರಿ ರಾಡ್ರಿಗಸ್, ಮಾಜಿ ಉಪಾಧ್ಯಕ್ಷ ಪಿ.ಆರ್.ಸುಕುಮಾರ್ ಸದಸ್ಯರುಗಳಾದ ಕೆ.ಇ.ಕರೀಂ, ಬಿ.ಎಂ.ಸುರೇಶ್, ರಜಾಕ್, ನಾಗರತ್ನ, ಎ.ಶ್ರೀಧರ್ ಕುಮಾರ್, ಶಿವಮ್ಮ, ಶಾಹಿದ್ , ಚಂದ್ರ ಹಾಗೂ ಗಂಗಮ್ಮ ಚುನಾವಣಾ ಅಖಾಡಕ್ಕೆ ಇಳಿದ್ದಾರೆ.
ಕಳೆದ ಸಾಲಿನ ಸದಸ್ಯರುಗಳಾದ ಈಶ್ವರ,ಹೇಮಂತ್‍ಕುಮಾರ್, ಶೋಭಾ ರವಿ, ರತ್ನ, ರೆಹನಾಸುಲ್ತಾನ್, ಸೋಮಯ್ಯ,ಜ್ಯೋತಿಭಾಸ್ಕರ, ಗಿರಿಜಾ ಉದಯಕುಮಾರ್ ಹಾಗೂ ವಳ್ಳಿ ಸ್ಫರ್ಧೆಯಿಂದ ವಿಮುಖರಾಗಿದ್ದಾರೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ 20 ಸ್ಥಾನಕ್ಕೆ 87 ಮಂದಿ ಸ್ಪರ್ಧಿಸಿದ್ದಾರೆ. ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆಯೋ ಎಂದು ತಾ. 30 ರವರೆಗೆ ಕಾಯಬೇಕಾಗಿದೆ.

error: Content is protected !!