ಮಡಿಕೇರಿಯಲ್ಲಿ ಡಿ.21 ರಂದು ಉದ್ಯೋಗ ಮೇಳ

December 17, 2020

ಮಡಿಕೇರಿ ಡಿ.17 : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಡಿ. 21 ರಂದು ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಈ ಉದ್ಯೋಗ ಮೇಳದಲ್ಲಿ ರಾಣಿ ಮದ್ರಾಸ್, ಮೈಸೂರು, ಹಿಮಸ್ತಿಂಗಕ ಲಯನ್ಸ್ ಹಾಸನ, ಜಸ್ಟ್ ಡಯಲ್, ಬೆಂಗಳೂರು, ಗ್ರಾಸ್ ರೂಟ್ಸ್, ಮೈಸೂರು, ಇಕ್ವಲೈಜ್ ಆರ್‍ಸಿಎಂ ಸರ್ವಿಸ್ಸಸ್, ಮೈಸೂರು ಹಾಗೂ ಟೊಯಟೊ ಶೋ ರೂಂ, ಮೈಸೂರು, ಕ್ಲಬ್ ಮಹೀಂದ್ರ ರೆಸಾರ್ಟ್, ಮಡಿಕೇರಿ ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣ ಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ ವಿವರಗಳ ಪ್ರತಿಗಳೊಂದಿಗೆ ಉದ್ಯೋಗ ಮೇಳದಲ್ಲಿ ಹಾಜರಾಗುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.

error: Content is protected !!