ವಾಹನ ಚಾಲಕರ ಹುದ್ದೆಗೆ ಟೆಂಡರ್ ಆಹ್ವಾನ

17/12/2020

ಮಡಿಕೇರಿ ಡಿ.17 : ಜಿಲ್ಲೆಯ ಅಬಕಾರಿ ಇಲಾಖೆಯ ಅಬಕಾರಿ ಉಪ ಆಯುಕ್ತರು, ಮಡಿಕೇರಿ ಕಚೇರಿ ಮತ್ತು ಅಧೀನ ಕಚೇರಿಗಳಲ್ಲಿ ಖಾಲಿ ಇರುವ ವಾಹನ ಚಾಲಕರ ಹುದ್ದೆಗೆ ಸರ್ಕಾರಿ ವಾಹನಗಳನ್ನು ಚಾಲನೆ ಮಾಡಲು ಬಾಹ್ಯ ಮೂಲದಿಂದ ಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರ ಸೇವೆಯನ್ನು ಪಡೆಯಬೇಕಿರುವುದರಿಂದ ಈ ಸಂಬಂಧ ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ.
ಸೇವೆಯನ್ನು ಒದಗಿಸಲು ಆಸಕ್ತ ಗುತ್ತಿಗೆದಾರರು ಕರ್ನಾಟಕ ಸರ್ಕಾರದ ಇ-ಪೆÇೀರ್ಟಲ್ ತಿತಿತಿ.eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ಟೆಂಡರ್ನಲ್ಲಿ ಭಾಗವಹಿಸಬಹುದು. ಪೂರ್ಣಗೊಳಿಸಿದ ಟೆಂಡರ್ ಫಾರ್ಮ್‍ಗಳನ್ನು ಡಿಸೆಂಬರ್, 31 ರ ಸಂಜೆ 5 ಗಂಟೆಯವರೆಗೆ ಸಲ್ಲಿಸಬಹುದು. ಟೆಂಡರ್ ಡಾಕ್ಯುಮೆಂಟನ್ನು ಸರ್ಕಾರದ ಇ-ಪೆÇೀರ್ಟಲ್‍ನಿಂದ ಪಡೆಯಬಹುದು ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.