ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

December 17, 2020

ನವದೆಹಲಿ ಡಿ.17 : ಗೃಹ ಬಳಕೆ ಎಲ್‍ಪಿಜಿ ದರವನ್ನು ಪ್ರತಿ ಸಿಲಿಂಡರ್‍ಗೆ 50 ರೂ. ಹೆಚ್ಚಿಸಲಾಗಿದ್ದು, ಕೇಂದ್ರ ಮತ್ತೆ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ.
ಇದು ಅಂತಾರಾಷ್ಟ್ರೀಯ ದರ ದೃಢೀಕರಣದ ನಂತರ ಡಿಸೆಂಬರ್ ನಲ್ಲೇ ಎರಡನೇ ಬಾರಿ ಬೆಲೆ ಏರಿಕೆಯಾಗಿರುವುದು. ಅಲ್ಲದೆ, ವಾಯುಯಾನ ಟರ್ಬೈನ್ ಇಂಧನ (ಎಟಿಎಫ್) ಬೆಲೆಯನ್ನು ಶೇಕಡಾ 6.3ರಷ್ಟು ಏರಿಸಲಾಗಿದೆ.
ರಾಜ್ಯ ಇಂಧನ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಸಬ್ಸಿಡಿ ರಹಿತ ಗೃಹ ಬಳಕೆ 14.2 ಕೆಜಿ ಸಿಲಿಂಡರ್ ಬೆಲೆಯನ್ನು ಹಿಂದಿನ 644 ರೂ.ಗಳಿಂದ 694 ರೂ.ಗೆ ಹೆಚ್ಚಿಸಲಾಗಿದೆ.
ಈ ತಿಂಗಳ ದರದಲ್ಲಿ ಇದು ಎರಡನೇ ಬಾರಿಗೆ ಹೆಚ್ಚಳವಾಗಿದೆ. ಡಿಸೆಂಬರ್ 1ರಂದು ಸಿಲಿಂಡರ್‍ಗೆ 50 ರೂ. ಹೆಚ್ಚಿಸಲಾಗಿತ್ತು. ಇದಕ್ಕೂ ಮುನ್ನ ಜುಲೈನಿಂದ ಸಿಲಿಂಡರ್ ಬೆಲೆ 594 ರೂ. ಇತ್ತು.
ದೆಹಲಿಯಲ್ಲಿ ಜೂನ್ 2019ಕ್ಕೆ 497 ರುಪಾಯಿ ಇದ್ದ ಸಬ್ಸಿಡಿ ಎಲ್ ಪಿಜಿ ಬೆಲೆಯನ್ನು ಇಲ್ಲಿಯವರೆಗೂ ಕ್ರಮವಾಗಿ 147 ರೂ. ಹೆಚ್ಚಿಸಲಾಗಿದೆ.

error: Content is protected !!