6 ವಿಚಕ್ಷಣಾ ವಿಮಾನಗಳ ನಿರ್ಮಾಣ

17/12/2020

ನವದೆಹಲಿ ಡಿ.17 : ಭಾರತೀಯ ವಾಯುಸೇನೆ ಮತ್ತಷ್ಟು ಬಲಿಷ್ಠವಾಗಲಿದ್ದು, ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಸೇನೆಗಾಗಿ 6 ವಿಚಕ್ಷಣಾ ವಿಮಾನಗಳನ್ನು ನಿರ್ಮಾಣ ಮಾಡಲಿದೆ.
ಅತ್ತ ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಸೇನೆಗಳು ಪ್ರಚೋದನೆ ನೀಡುತ್ತಿರುವ ಹೊತ್ತಿನಲ್ಲೇ ಭಾರತ ತನ್ನ ದೇಶೀಯ ರಕ್ಷಣಾ ಸಾಮಥ್ರ್ಯವನ್ನು ಬಲಪಡಿಸಿಕೊಳ್ಳುವತ್ತ ಸಾಗಿದೆ. ಈ ಹಿಂದೆ ದೇಶೀಯ ಯುದ್ಧ ನೌಕೆಗಳ ನಿರ್ಮಾಣಕ್ಕೆ ಒತ್ತು ನೀಡಿದ್ದ ಸೇನೆ, ಇದೀಗ ತನ್ನ ವಿಚಕ್ಷಣಾ ಸಾಮಥ್ರ್ಯವನ್ನು ಬಲಪಡಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದೆ.
ವಾಯುಸೇನೆಯ ಬಲ ಹೆಚ್ಚಿಸಲು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ವಾಯುಸೇನೆಗೆ ಆರು ವಿಚಕ್ಷಣಾ (ವಾಯುಗಾಮಿ ಆರಂಭಿಕ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನ) ವಿಮಾನಗಳನ್ನು ತಯಾರಿಸಿ ಕೊಡಲಿದೆ. ಈ ಯೋಜನೆಗಾಗಿ ಡಿಆರ್ ಡಿಒ ಮತ್ತು ವಾಯು ಸೇನೆ ಸುಮಾರು 10,500 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿದ್ದು. ಎಇಯು ಮತ್ತು ಸಿ ಬ್ಲಾಕ್ 2 ಮಾದರಿಯ 6 ವಿಮಾನಗಳನ್ನು ತಯಾರಿಸಲು ಡಿಆರ್ ಡಿಒ ಮುಂದಾಗಿದೆ.