ಚೀಸ್ ಕಬಾಬ್ ಮಾಡುವ ವಿಧಾನ

17/12/2020

ಬೇಕಾಗುವ ಸಾಮಾಗ್ರಿಗಳು: ಸಣ್ಣ ಚೂರುಗಳಾಗಿ ಕತ್ತರಿಸಿದ ಚಿಕ್ಕನ್, ಚೀಸ್ ( ತುರಿದ), ಈರುಳ್ಳಿ 1 (ಕತ್ತರಿಸಿದ್ದು), ಒಂದು ದೊಡ್ಡ ಚಮಚ ಬೆಳ್ಳುಳ್ಳಿ ಪೇಸ್ಟ್, ನಿಂಬೆರಸ 2 ಚಮಚ, ಹಸಿಮೆಣಸು 5 ( ಕತ್ತರಿಸಿದ್ದು), ಹರಿಮೆಣಸು 1 ಚಮಚ, ಕೆಂಪು ಮೆಣಸಿನ ಪುಡಿ 1 ಚಮಚ, ಗರಂ ಮಸಾಲ 1 ಚಮಚ, ಚಕ್ಕೆ ಪುಡಿ 1 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು (ಸ್ವಲ್ಪ), 2 ಮೊಟ್ಟೆಯ ಬಿಳಿ, ಅಕ್ಕಿ ಪುಡಿ 1 ಚಮಚ, ಜೋಳದ ಪುಡಿ 2 ಚಮಚ, ಎಣ್ಣೆ, ರುಚಿಗೆ ತಕ್ಕ ಉಪ್ಪು,

ತಯಾರಿಸುವ ವಿಧಾನ: ದೊಡ್ಡ ಬಟ್ಟಲಿನಲ್ಲಿ ಈರುಳ್ಳಿ, ಶುಂಠಿ, ಹಸಿಮೆಣಸು, ಕರಿಮೆಣಸು, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಚಕ್ಕೆ, ರುಚಿಗೆ ತಕ್ಕ ಉಪ್ಪು ಮತ್ತು ನಿಂಬೆರಸ ಹಾಕಿ ಮಿಶ್ರ ಮಾಡಬೇಕು. ಚಿಕ್ಕ ತುಂಡುಗಳಾಗಿ ಕತ್ತರಿಸಿದ ಚಿಕ್ಕನ್ ಆ ಮಿಶ್ರಣದೊಂದಿಗೆ ಚೆನ್ನಾಗಿ ಬೆರೆಸಿ ಒಂದು ಗಂಟೆ ಇಡಬೇಕು.ಈಗ ಜೋಳದ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಅದನ್ನು ಚಿಕ್ಕನ್ ಜೊತೆ ಮಿಶ್ರಮಾಡಬೇಕು. ಈಗ ಮಿಶ್ರಣ ಸ್ವಲ್ಪ ಗಟ್ಟಿಯಾಗುತ್ತದೆ. ಈಗ ಅದರಿಂದ ಕಟ್ ಲೆಟ್ ಮಾಡಿ ಕೈ ಬೆರಳಿನಿಂದ ತೂತ ಮಾಡಬೇಕು, ಈಗ ಅದರಲ್ಲಿ ತುರಿದ ಚೀಸ್ ತುಂಬಿ ಅದನ್ನು ಮುಚ್ಚಬೇಕು. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಮಾಡಬೇಕು. ಅದು ಕುದಿ ಬರುವಾಗ ಕಬಾಬ್ ಅನ್ನು ಮೊಟ್ಟೆಯಲ್ಲಿ ಅದ್ದಿ ಅದನ್ನು ಅಕ್ಕಿ ಪುಡಿಯಲ್ಲಿ ಹಾಕಿ ಎಣ್ಣೆಯಲ್ಲಿ ಹಾಕಬೇಕು. ಕಬಾಬ್ ಚೆನ್ನಾಗಿ ಕರಿದ ಮೇಲೆ ತೆಗೆಯಬೇಕು.