ಪುಷ್ಪಗಿರಿ ಜೆಸಿಐನ ನೂತನ ಅಧ್ಯಕ್ಷರಾಗಿ ಮಾಯಾ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನೆಲ್ಸನ್ ಡಿಸೋಜ ಆಯ್ಕೆ

December 17, 2020

ಮಡಿಕೇರಿ ಡಿ. 17 : ಸೋಮವಾರಪೇಟೆಯ ಪುಷ್ಪಗಿರಿ ಜೆಸಿಐನ ನೂತನ ಅಧ್ಯಕ್ಷರಾಗಿ ಮಾಯಾ ಗಿರೀಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನೆಲ್ಸನ್ ಡಿಸೋಜ ಆಯ್ಕೆಯಾಗಿದ್ದಾರೆ.
ಪಟ್ಟಣದ ಮಹಿಳಾ ಸಮಾಜದಲ್ಲಿ ಅಧ್ಯಕ್ಷೆ ಉಷಾ ರಾಣಿ ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಜೇಸಿರೇಟ್ಸ್ ಛೇರ್‍ಪರ್ಸನ್ ಆಗಿ ಪವಿತ್ರಾ ಲಕ್ಷ್ಮೀಕಾಂತ್ ಹಾಗೂ ಜೂನಿಯರ್ ಜೆಸಿ ಛೇರ್‍ಪರ್ಸನ್ ಆಗಿ ಪ್ರಣವ್ ಎಸ್. ಕಶ್ಯಪ್ ಆಯ್ಕೆಯಾಗಿದ್ದಾರೆ.

error: Content is protected !!