ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾಗಿ 11 ಮಂದಿ ಆಯ್ಕೆ

December 17, 2020

ಮಡಿಕೇರಿ ಡಿ. 17 : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2020-2025ನೇ ಅವಧಿಗೆ ನೂತನ ಆಡಳಿತ ಮಂಡಳಿ ರಚನೆ ಸಂಬಂಧ ತಾಲ್ಲೂಕು ಕಾರ್ಯಕಾರಿ ಸಮಿತಿಗೆ ಚುನಾವಣಾ ಪ್ರಕ್ರಿಯೆ ಸೋಮವಾರಪೇಟೆಯ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಿತು.
ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಪದಾಧಿಕಾರಿಗಳ ಹುದ್ದೆಗೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಜಿದ್ದಾ ಜಿದ್ದಿನ ಹೋರಾಟಕ್ಕೆ ಮುಂದಾಗಿದ್ದರು. ನೂತನ ಸಾಲಿನ ಆಡಳಿತ ಮಂಡಳಿ ಚುನಾವಣೆಗೆ 17 ಮಂದಿ ಸ್ಪರ್ಧಿಸಿದ್ದು, 11 ಮಂದಿ ನಿರ್ದೇಶಕರುಗಳಾಗಿ ಆಯ್ಕೆಯಾದರು. ಸಾಮಾನ್ಯ ಕ್ಷೇತ್ರದಿಂದ ಹೆಚ್.ಎಸ್. ಚೇತನ್, ಹೆಚ್.ಎನ್. ಮಂಜುನಾಥ್, ಟಿ.ಕೆ.ಬಸವರಾಜು, ಎಸ್.ಎ. ಯೋಗೇಶ್, ಕೆ.ಎಸ್. ಪ್ರಸನ್ನಕುಮಾರ್, ಎಸ್.ಎಂ. ರವಿ, ಹೆಚ್.ಪಿ. ಕರುಂಬಯ್ಯ, ಮಹಿಳಾ ಮೀಸಲು ಕ್ಷೇತ್ರದಿಂದ ಎಸ್.ಕೆ. ಸೌಭಾಗ್ಯ, ಹೆಚ್.ಎಸ್. ಉಮಾದೇವಿ, ಎಲ್.ಎಂ. ಪ್ರೇಮಾ, ಜಿ.ಪಿ. ಕವಿತ ಅವರುಗಳು ಆಯ್ಕೆಯಾದರು. 517 ಮತದಾರರ ಪೈಕಿ 500 ಶಿಕ್ಷಕರು ಮತದಾನ ಮಾಡಿದ್ದರು.
ಚುನಾವಣಾಧಿಕಾರಿಗಳಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಡಾ. ಸದಾಶಿವ ಎಸ್. ಪಲ್ಲೇದ್ ಕಾರ್ಯ ನಿರ್ವಹಿಸಿದರು.

error: Content is protected !!