ಮಡಿಕೇರಿ ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಸರಿಪಡಿಸಿದ ನಗರಸಭೆ

December 17, 2020

ಮಡಿಕೇರಿ ಡಿ. 17 : ನಗರದ ಖಾಸಗಿ ಬಸ್ ನಿಲ್ದಾಣವನ್ನು ಕಾಡುತ್ತಿದ್ದ ಅವ್ಯವಸ್ಥೆಗಳನ್ನು ನಗರಸಭೆ ಸ್ವಲ್ಪ ಮಟ್ಟಿಗೆ ಸರಿಪಡಿಸಿದೆ. ಶೌಚಾಲಯದಲ್ಲಿ ಹಾನಿಗೀಡಾಗಿದ್ದ ಪೈಪ್ ಗಳನ್ನು ತೆಗೆದು ಹೊಸ ಪೈಪ್ ಗಳನ್ನು ಹಾಕಲಾಗಿದೆ. ವಿದ್ಯುತ್ ಸಂಪರ್ಕಕ್ಕೆ ಮತ್ತು ಶೌಚಾಲಯದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಮತ್ತು ಆವರಣದಲ್ಲಿರುವ ದೂಳಿನ ವಾತಾವರಣವನ್ನು ಸರಿಪಡಿಸಿಲ್ಲವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ರಾಂತಿ ಕೊಠಡಿ ಬೇಕು ಎಂದು ಬಸ್ ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.

error: Content is protected !!