ಭಾಗಮಂಡಲ ಸುತ್ತಮುತ್ತಲ ಗ್ರಾಮಗಳನ್ನು ಕಾಡುತ್ತಿರುವ ಕಾಡಾನೆಗಳ ಹಿಂಡು

December 17, 2020

ಮಡಿಕೇರಿ ಡಿ. 17 : ಕಳೆದ ಒಂದು ವಾರದಿಂದ ಭಾಗಮಂಡಲದ ಸುತ್ತಮುತ್ತಲ ಗ್ರಾಮಗಳನ್ನು ಕಾಡಾನೆಗಳ ಹಿಂಡು ಕಾಡುತ್ತಿದೆ. ಕೋಪಟ್ಟಿ, ಕೋಳಿಕಾಡು ಮತ್ತಿತರ ಗ್ರಾಮಗಳಲ್ಲಿ ಸುಮಾರು 8 ರಿಂದ 10 ಕಾಡಾನೆಗಳು ಬೀಡು ಬಿಟ್ಟಿದ್ದು, ಕೊಯ್ಲಿಗೆ ಬಂದಿರುವ ಭತ್ತದ ಫಸಲನ್ನು ನಾಶ ಪಡಿಸಿವೆ. ಇದರಿಂದ ರೈತರು ಬೇಸತ್ತಿದ್ದು, ತಕ್ಷಣ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣ ಮೂಡಿದ್ದು, ಸ್ಥಳೀಯ ನಿವಾಸಿಗಳು ಮನೆಯಿಂದ ಹೊರ ಬರಲು ಸಾಧ್ಯವಾಗದ ಪರಿಸ್ಥಿತಿ ಇದೆ.

error: Content is protected !!