ಸಾಂಸ್ಕೃತಿಕ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ

December 17, 2020

ಮಡಿಕೇರಿ ಡಿ.17 : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದಲ್ಲಿ 10 ದಿವಸಗಳು ಮಹಿಳೆಯರಿಗೆ ಸಾಂಸ್ಕೃತಿಕ ತರಬೇತಿ ಶಿಬಿರ ಆಯೋಜಿಸಲು ಉದ್ದೇಶಿಸಿದೆ. ಶಿಬಿರದಲ್ಲಿ ಸೋಬಾನೆ ಪದ ಹೇಳುವುದು, ಅರೆಭಾಷೆ ಹಾಡು, ಹೆಣ್ಣು ಗಂಡು ವಹಿಸುವುದು, ಸ್ವರ್ಗ ಸಲ್ಲಿಸುವುದು, ಅರೆಭಾಷೆ ಜನಪದ ಕೋಲಾಟ ಮತ್ತು ಅರೆಭಾಷೆ ಜನಪದ ನೃತ್ಯ ಇವುಗಳ ಬಗ್ಗೆ ಪರಿಣಿತರಿಂದ ತರಬೇತಿ ನೀಡಲಾಗುವುದು.
ಸೋಬಾನೆ, ಅರೆಭಾಷೆ ಹಾಡು, ಹೆಣ್ಣು ಗಂಡು ವಹಿಸುವುದು, ಸ್ವರ್ಗ ಸಲ್ಲಿಸುವುದಕ್ಕೆ (18 ರಿಂದ 40 ರ ವಯಸ್ಸಿನವರು), ಅರೆಭಾಷೆ ಜನಪದ ಕೋಲಾಟ ಮತ್ತು ಅರೆಭಾಷೆ ಜನಪದ ನೃತ್ಯ (18 ರಿಂದ 30ರ ವಯಸ್ಸಿನವರು), ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಇರುವವರು ತಮ್ಮ ಸ್ವ ವಿವರವನ್ನು ಡಿಸೆಂಬರ್, 31 ರೊಳಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಸಲ್ಲಿಸತಕ್ಕದ್ದು. ತರಬೇತಿ ಸಂಪೂರ್ಣ ಉಚಿತವಾಗಿರುತ್ತದೆ. ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿಕೃಪಾ, ರಾಜಸೀಟ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. ಮೊ ನಂ 6362522677 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Vector design of Indian couple playing Garba in Dandiya Night Navratri Dussehra festival of India

error: Content is protected !!