ಕಾಂಗ್ರೆಸ್ ಪಕ್ಷದವರ ಹತಾಶ ಮನೋಭಾವನೆ ಗದ್ದಲಕ್ಕೆ ಕಾರಣ : ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ

17/12/2020

ಮಡಿಕೇರಿ,ಡಿ.17: ವಿಧಾನ ಪರಿಷತ್ ಗದ್ದಲಕ್ಕೆ ಕಾಂಗ್ರೆಸ್ ಪಕ್ಷದವರ ಹತಾಶ ಮನೋಭಾವವೇ ಕಾರಣವೆಂದು ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ವಸತಿ ಸಚಿವ ವಿ.ಸೋಮಣ್ಣ ಆರೋಪಿಸಿದರು.
ಸಂಪಾಜೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನು ಎರಡು ಬಾರಿ ಪರಿಷತ್ ಸದಸ್ಯನಾಗಿದ್ದೆ, ಸ್ಪೀಕರ್ ರಾಜೀನಾಮೆ ನೀಡಲು ಸಿದ್ಧರಿದ್ದರೂ ಕೂಡ ಅವರ ಪಕ್ಷದವರು ತಡೆಯಲು ಮುಂದಾದರು. ಕಾಂಗ್ರೆಸ್‍ನವರು ಹತಾಶರಾಗಿ ಆ ಘಟನೆಗೆ ಕಾರಣರಾಗಿದ್ದಾರೆÉಂದು ಸೋಮಣ್ಣ ಹೇಳಿದರು. ಮೇಲ್ಮನೆ ಅಂದರೆ ಚಿಂತಕರ ಚಾವಡಿ ಅಂತಾರೆ, ಅದನ್ನ ಗದಾ ಪ್ರಹಾರ ಮಾಡುವ ವ್ಯವಸ್ಥೆ ಮಾಡಿಬಿಟ್ಟರು. ಇಂತಹ ಕಹಿ ಘಟನೆ ನಡೆಯೋದಕ್ಕೆ ಕಾಂಗ್ರೆಸ್ ಕಾರಣ ಎಂದು ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದರು.