ವಿರಾಜಪೇಟೆಯಲ್ಲಿ ಗಾಂಜಾ ಮಾರಾಟ : ಐವರ ಬಂಧನ

December 17, 2020

ಮಡಿಕೇರಿ ಡಿ.17 : ವಿರಾಜಪೇಟೆ ಪಟ್ಟಣದ ಚಿಕ್ಕಪೇಟೆಯ ಕೊಡವ ಸಮಾಜ ಜಂಕ್ಷನ್ ಸಮೀಪವಿರುವ ಬಸ್ಸು ತಂಗುದಾಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಯುವಕರನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ವಿರಾಜಪೇಟೆ ನಗರದ ಸೆಲ್ವನಗರದ ನಿವಾಸಿ ಮೆಕಾನಿಕ್ ಎ.ಎಸ್.ಸಾದಿಕ್(31), ಸುಭಾಷ್ ನಗರದ ನಿವಾಸಿ ಅಬ್ದುಲ್ ಜಮೀಲ್ ಬಬ್ಲು(26), ಕಲ್ಲುಬಾಣೆ ಅರ್ಜಿ ನಿವಾಸಿ ಕೆ.ಇ.ಕಬೀರ್(27), ಮೀನುಪೇಟೆ ನಿವಾಸಿ ಮೆಲ್ವೀನ್ ಅಂತೋಣಿ(22) ಹಾಗೂ ವಿಜಯನಗರ ನಿವಾಸಿ ಎಂ.ಎ.ಇಮ್ರಾನ್ ಸೋನು (22) ಬಂಧಿತ ಆರೋಪಿಗಳು.
ಖಚಿತ ಮಾಹಿತಿಯ ಹಿನ್ನೆಲೆ ಪೊಲೀಸರು ದಾಳಿ ನಡೆಸಿ ಯುವಕರನ್ನು ಬಂಧಿಸಿ 1.48 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಇದರ ಒಟ್ಟು ಮೌಲ್ಯ 50 ಸಾವಿರ ರೂ. ಎಂದು ಪೊಲೀಸರು ಅಂದಾಜಿಸಿದ್ದಾರೆ. ದಂಧೆಗೆ ಬಳಸಿದ ಬೈಕ್ ಮತ್ತು ಸ್ಕೂಟರ್ ವೊಂದನ್ನು ವಶಕ್ಕೆ ಪಡೆಯಲಾಗಿದೆ. ವಿರಾಜಪೇಟೆ ಉಪವಿಭಾಗದ ಡಿವೈಎಸ್ ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕÀ ಕ್ಯಾತೆಗೌಡ ಅವರ ನಿರ್ದೇಶನದಲ್ಲಿ ನಗರ ಉಪನಿರೀಕ್ಷಕರುಗಳಾದ ಜಗದೀಶ್ ಧೂಳ ಶೆಟ್ಟಿ, ಹೆಚ್,ಎಸ್.ಬೋಜಪ್ಪ, ಸಹ ನೀರಿಕ್ಷಕರುಗಳಾದ ಸುಬ್ರಮಣಿ, ಫ್ರಾನ್ಸಿಸ್, ಸಿಬ್ಬಂದಿಗಳಾದ ಮನು, ವಿಶ್ವನಾಥ್, ರಾಮಾಪ್ಪ, ರಂಜಿತ್, ಎನ್.ಎಸ್.ಲೊಕೇಶ್, ಗಿರೀಶ್, ಚಂದ್ರಶೇಖರ್, ಚಾಲಕ ಪೂವಯ್ಯ, ಸಿ.ಡಿ.ಆರ್ ವಿಭಾಗದ ರಾಜೇಶ್ ಹಾಗೂ ಗಿರೀಶ್ ಅವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!