ಯೋಗಾಸನ ಸ್ಪರ್ಧಾತ್ಮಕ ಕ್ರೀಡೆ

December 18, 2020

ನವದೆಹಲಿ ಡಿ.18 : ಕೇಂದ್ರ ಸರ್ಕಾರ ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯೆಂದು ಔಪಚಾರಿಕವಾಗಿ ಘೋಷಿಸಿದೆ. ಇದು ಪ್ರಾಚೀನ ಯೋಗಾಭ್ಯಾಸದ ಕ್ಷೇತ್ರದಲ್ಲಿ ಸರ್ಕಾರದ ಹಣ ವಿನಿಯೋಗಕ್ಕೆ ಮಾರ್ಗ ಒದಗಿಸಲಿದೆ.
ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತು ಆಯುಷ್ ಆಯುಷ್ ಸಚಿವ ಶ್ರೀಪಾದ ಯೆಸ್ಸೊ ನಾಯಕ್ ಅವರು ಕಾರ್ಯಕ್ರಮವೊಂದರಲ್ಲಿ ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆ ಎಂದು ಔಪಚಾರಿಕವಾಗಿ ಘೋಷಿಸಿದ್ದಾರೆ. ಯೋಗವನ್ನು ಉತ್ತೇಜಿಸಲು, ಅದರ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಲು ಈ ಕ್ರಮಕ್ಕೆ ಮುಂಡಾಗಿರುವುದಾಗಿ ಅವರು ಹೇಳಿದ್ದಾರೆ.
“ಯೋಗಾಸನ ದೀರ್ಘಕಾಲದಿಂದ ಸ್ಪರ್ಧಾತ್ಮಕ ಕ್ರೀಡೆಯಾಗಿದೆ. ಆದರೆ ಇದನ್ನು ಅಧಿಕೃತ ಮತ್ತು ಮಾನ್ಯತೆ ಪಡೆದ ಸ್ಪರ್ಧಾತ್ಮಕ ಕ್ರೀಡೆ ಎಂದು ಭಾರತ ಸರ್ಕಾರ ಇದುವರೆಗೆ ಮಾನ್ಯತೆ ನೀಡಿರಲಿಲ್ಲ. ಇಂದು ಒಂದು ಮಹತ್ವದ ದಿನ ನಾವು ಇದನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಔಪಚಾರಿಕವಾಗಿ ಪ್ರಾರಂಭಿಸುತ್ತಿದ್ದೇವೆ ಮತ್ತು ಅದು ಬಹಳ ದೂರದವರೆಗೆ ಪ್ರಭಾವ ಬೀರಲಿದೆ ಎಂದು ನನಗೆ ಖಾತ್ರಿಯಿದೆ” ಎಂದು ಅವರು ಹೇಳಿದರು.

error: Content is protected !!