ಮಡಿಕೇರಿಯಲ್ಲಿ ಭವ್ಯ ಶ್ರೀರಾಮ ದೇಗುಲ

18/12/2020

ಸುಮಾರು 60 ವರ್ಷ ಗಳಿಗಿಂತಲೂ ಹಿಂದೆ ಭಕ್ತಿ ಪೂರ್ವಕವಾಗಿ ಮಲ್ಲಿಕಾರ್ಜುನ ನಗರದಲ್ಲಿ ಕೋದಂಡರಾಮನ ಫೆÇೀಟೋ ಇಟ್ಟು ಪೂಜೆ ಮಾಡುತ್ತಿದ್ದ ಹಾಗೂ ಬಳಿಕ ಕಿರು ದೇವಾಲಯ ನಿರ್ಮಾಣ ಗೊಂಡಿದ್ದ ಸ್ಥಳದಲ್ಲಿ ಇದೀಗ ಭವ್ಯವೂ, ಸುಂದರವೂ ಆದ ಶಿಲಾಮಯದಿಂದ ಕೂಡಿದ ನೂತನ ದೇಗುಲವು ಈಗಾಗಲೇ ನಿರ್ಮಾಣದ ಹಂತದಲ್ಲಿದೆ. ಮಲ್ಲಿಕಾರ್ಜುನ ನಗರದಲ್ಲಿ ಶ್ರೀರಾಮನ (ಮಂದಿರ) ಕಿರು ದೇವಸ್ಥಾನವನ್ನು ನಿರ್ಮಿಸುವಲ್ಲಿ ದಿವಂಗತ ಹೆಚ್. ನಿಂಗಪ್ಪ ಮತ್ತಿತರರು ಪ್ರಯತ್ನಿಸಿ ಸಫಲರಾಗಿದ್ದರು. 1990ರಲ್ಲಿ ನಿರ್ಮಿಸಲಾಗಿತ್ತು. ಸೀತಾ, ಲಕ್ಷ್ಮಣ, ಹನುಮಂತ ಸಹಿತನಾಗಿ ಶ್ರೀ ಕೋದಂಡ ರಾಮ ವಿಗ್ರಹವನ್ನು ಇತ್ತೀಚೆಗಷ್ಟೆ ದೈವಾಧೀನರಾದ ಪರಮಪೂಜ್ಯ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರು ಆಗ ಪ್ರತಿಷ್ಠಾಪಿಸಿದ್ದರು. ನಂತರದ ದಿನಗಳಲ್ಲಿ ಬೆಳಿಗ್ಗೆ ಸಂಜೆ ಪೂಜಾದಿಗಳಲ್ಲದೆ ಭಜನೆಗಳು ಸ್ಥಳೀಯ ಭಕ್ತರ ಸಹಕಾರದಿಂದ ನೆರವೇರುತ್ತಿದ್ದವು. ಇದೇ ಜಾಗದಲ್ಲಿ ಸಮುದಾಯ ಭವನವು ರೂಪುಗೊಂಡಿತ್ತು. ಪ್ರತಿಘಿಷ್ಠಾಪನೆಗೊಂಡ ಬಳಿಕ ಪ್ರತಿವರ್ಷವೂ ಶ್ರೀರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿತ್ತು. ಅಲ್ಲದೆ, ಕಳೆದ 45 ವರ್ಷಗಳಿಂದ ದಸರಾ ಮಂಟಪವನ್ನು ಹೊರಡಿಸಲಾಗುತ್ತಿದೆ. ವಿಶೇಷ ಎಂಬಂತೆ ಶ್ರೀರಾಮ ಜನ್ಮಭೂಮಿಯ ದೇವಾಲಯವು ನಿರ್ಮಾಣಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಗರದ ನಿವಾಸಿಗಳ ಹಾಗೂ ರಾಮಭಕ್ತರ ಉತ್ಸಾಹದಿಂದ ಕಿರು ದೇಗುಲವಿದ್ದ ಸ್ಥಳದಲ್ಲಿ ಇದೀಗ ಭವ್ಯ ದೇಗುಲ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.

ಭಕ್ತರ ಹಾಗೂ ನಿವಾಸಿಗಳ ಸಹಕಾರದಿಂದ ಜಲ್ಲಿ, ಸಿಮೆಂಟು ಮರಳು, ಕಲ್ಲು, ಸ್ಟೀಲ್ ಇತ್ಯಾದಿ ಸಾಮಾಗ್ರಿಗಳ ರೂಪದಲ್ಲಿ ದಾನ ಪಡೆದು ಹಾಗೂ ಕೆಲವರಿಂದ ಧನ ಸಹಾಯ ಪಡೆದು ಸಮಿತಿಯ ಕಾರ್ಯಕರ್ತರೆ ಒಂದು ಹಂತದ ಕಾಮಗಾರಿಯನ್ನು ಪೂರೈಸಿದ್ದಾರೆಂದರೆ ಆಶ್ಚರ್ಯವೇ ಸರಿ.
ಸುಮಾರು 1 ಕೋಟಿ ರೂ. ಗಳಿಂಗತಲೂ ಅಧಿಕ ವೆಚ್ಚದಲ್ಲಿ ದೇವಾಲಯ ಪುನನಿರ್ಮಾಣವನ್ನು ಕೈಗೊಂಡಿರುವುದಾಗಿದೆ. ಈ ಅಭಿವೃದ್ಧಿ ಕೆಲಗಳಿಗಾಗಿ ಧಾರ್ಮಿಕ ತಜ್ಞ ಹಿರಿಯರಿಂದ ಸಲಹೆ ಪಡೆದು ಧಾರ್ಮಿಕ ವಿಧಿವಿಧಾನಗಳಿಗೆ ಕುಂದುಂಟಾಗದಂತೆ ಕಾರ್ಯ ನಿರ್ವಹಿಸಲಾಗಿದೆ. ಇದಲ್ಲದೆ ಗಣಪತಿ ಗುಡಿಯ ನಿರ್ಮಾಣ ಕಾರ್ಯವನ್ನು ಇನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುತ್ತದೆ. ಈಗಾಗಲೇ ಕೈಗೊಂಡ ಕೆಲಸಗಳಿಗೆ ನಗರದ ದಾನಿಗಳಿಂದಲೂ, ಶಾಸಕರು, ವಿಧಾನಪರಿಷತ್ ಸದಸ್ಯರೂ, ಸಂಸತ್ ಸದಸ್ಯರು ಪೂರ್ಣ ಸಹಕಾರ ದೊರೆತಿರುವುದರಿಂದ ಮುಂದುವರೆದಿದೆ. ಪ್ರಸ್ತುತ ಕೋದಂಡ ರಾಮ ದೇಗುಲದ ಶಿಲಾಮಯ ಗರ್ಭಗುಡಿಯ ನಿರ್ಮಾಣ ಕಾರ್ಯವನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ವಿಜಯ ಎಂಬವರು ಪೂರ್ಣಗೊಳಿಸಿದ್ದಾರೆ.
ಗರ್ಭಗುಡಿಯ ಜೋಡಣೆಯನ್ನು ದೇವಾಲಯದಲ್ಲಿ ಇತ್ತೀಚೆಗೆ ಮಾಡಲಾಗಿದೆ. ಶಿಲ್ಪಿ ವಿಜಯವರ ಕಲಾ ನೈಪುಣ್ಯವನ್ನು ದೇವಾಲಯದ ಗರ್ಭ ಗುಡಿಯ ಸುತ್ತಲೂ ಕಾಣಬಹುದು. ಅತ್ಯಂತ ಸುಂದರವಾಗಿ ಕೆತ್ತನೆ ಕೆಲಸಗಳಲ್ಲದೆ ಆ ಗರ್ಭಗುಡಿಯ ಪ್ರವೇಶದ್ವಾರದ ಮೇಲ್ಬಾಗದಲ್ಲಿ ಹನುಮನು ಭಕ್ತಿಯಿಂದ ರಾಮನಿಗೆ ನಮಸ್ಕರಿಸುವ ಚಿತ್ರಣ, ಇನ್ನೊಂದು ಭಾಗದಲ್ಲಿ ಗರುಡನ ಚಿತ್ರಣ ಹಾಗೂ ಮಧ್ಯದಲ್ಲಿ ನವಿಲುಗಳ ಮಧ್ಯೆ ಶಿವಲಿಂಗವನ್ನು ಕೆತ್ತಿರುವುದು ಗರ್ಭಗುಡಿಗೆ ವಿಶೇಷ ಮೆರುಗನ್ನು ನೀಡಿದೆ. ದೇವಾಲಯದ ಪ್ರಾಂಗಣದಲ್ಲಿ ನವಗ್ರಹಗಳನ್ನು ಪ್ರತಿಷ್ಠಾಪಿಲಾಗುವುದಲ್ಲದೆ ನೈವೇದ್ಯಶಾಲೆ, ಕೌಂಟರ್‍ಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇನ್ನು ಉಳಿದ ಅಭಿವೃದ್ಧಿ ಕೆಲಸಗಳಿಗಾಗಿ ರಾಮಭಕ್ತರಿಂದ ಉದಾರ ಧನಸಹಾಯವನ್ನು ಯಾಚಿಸಲಾಗುತ್ತಿದೆ.

ದಾನಿಗಳ ನೆರವಿನಿಂದ ದೇವಾಲಯ ಸ್ವಯಂ ಸೇವಕರು ಶ್ರೀರಾಮನ ಭವ್ಯ ದೇಗುಲದ ನಿರ್ಮಾಣದಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿದ್ದಾರೆ. ಮಡಿಕೇರಿಯ, ಕೊಡಗು ಜಿಲ್ಲೆಯ ಭಕ್ತಾದಿಗಳು ತಮ್ಮ ನೆರವನ್ನು ಈ ಕೆಳಗಿನ ಅಕೌಂಟ್‍ಗೆ ಸಂದಾಯ ಮಾಡಿ ಸಹಕರಿಸುವಂತೆ ದೇವಸ್ಥಾನ ಸಮಿತಿಯವರು ಕೋರಿದ್ದಾರೆ.

A/C No : 020301000010359

Name: Mallikarjunanagara

Ram Mandira Temple Trust

IFSC:IOBAOOOO203


ಉದಾರ ದಾನಿಗಳು ತಾವು ಈ ಅಕೌಂಟ್ ನಂಬರಿಗೆ ಹಣವನ್ನು ಸಂದಾಯ ಮಾಡುವಂತೆ ಕೋರಾಲಗಿದೆ. ಬಳಿಕ ತಮ್ಮ ಹೆಸರು, ವಿಳಾಸವನ್ನು ಈ ಕೆಳಗಿನ ಯಾವುದಾದರೂ ವಾಟ್ಸಾಪ್ ನಂಬರಿಗೆ ಕಳುಹಿಸಿ, ಬಳಿಕ ರಶೀತಿ ಕಳುಹಿಸಲಾಗುವುದು. ದೇವಾಲಯಕ್ಕೆ ಜಲ್ಲಿ, ಸಿಮೆಂಟ್, ಮರಳು, ಸ್ಟೀಲ್ ಇತ್ಯಾದಿಗಳನ್ನು ಕೊಡುಗೆ ನೀಡುವವರೂ ಈ ಕೆಳಗಿನ ಯಾರಾದರೊಬ್ಬರನ್ನು ಸಂಪರ್ಕಿಸಬಹುದು. ನೀಡುವ ವಸ್ತುಗಳಿಗೂ ಪ್ರತ್ಯೇಕ ರಶೀತಿ ನೀಡಲಾಗುತ್ತದೆ.
ಹೆಚ್.ಹೆಚ್. ಮಂಜುನಾಥ್-9113992762, ಎಸ್.ಎಸ್. ಸಂಪತ್‍ಕುಮಾರ್ – 9448409699
(ವಿ. ಸೂ. : ರೂ. 500ಕ್ಕಿಂತ ಅಧಿಕ ದೇಣಿಗೆ ನೀಡಿದವರ ಹಾಗೂ ವಸ್ತುಗಳನ್ನು ನೀಡಿದವರ ಹೆಸರುಗಳನ್ನು “ಶಕ್ತಿ” ದಿನಪತ್ರಿಕೆಯಲ್ಲಿ ಪ್ರಕಟಿಸ ಲಾಗುವುದು, ನಗದು ಹಣವನ್ನು ಖುದ್ದಾಗಿ ತಲಪಿಸುವವರು ಮೊಬೈಲ್ ಸಂಖ್ಯೆ-8660724010 ಸಂಪರ್ಕಿಸಿ.)
ಬರಹ: ಸಂಪತ್ ಕುಮಾರ್