ಹಿರಿಯ ಕಾಂಗ್ರೆಸ್ಸಿಗ ರವೀಂದ್ರ ಕುಮಾರ್ ಹೆಬ್ಬಾರ್ ಮನವೊಲಿಸಿದ ಎ.ಎಸ್. ಪೊನ್ನಣ್ಣ

December 18, 2020

ಮಡಿಕೇರಿ ಡಿ.18 : ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಮುನಿಸಿಕೊಂಡು ರಾಜೀನಾಮೆ ನಿರ್ಧಾರ ಕೈಗೊಂಡಿದ್ದ ಪಕ್ಷದ ಹಿರಿಯ ಮುಖಂಡ ಹಾಗೂ ಸಾಮಾಜಿಕ ಚಿಂತಕ ರವೀಂದ್ರ ಕುಮಾರ್ ಹೆಬ್ಬಾರ್ ಅವರನ್ನು ಕೆಪಿಸಿಸಿ ವಕ್ತಾರ ಹಾಗೂ ಕಾನೂನು, ಮಾನವ ಹಕ್ಕು ಮತ್ತು ಆರ್‍ಟಿಐ ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು ಭೇಟಿ ಮಾಡಿದರು.
ಭಾಗಮಂಡಲದಲ್ಲಿರುವ ಹೆಬ್ಬಾರ್ ಅವರ ಮನೆಗೆ ತೆರಳಿ ಚರ್ಚಿಸಿದ ಅವರು ಕಾಂಗ್ರೆಸ್ ಪಕ್ಷ ತೊರೆಯದಂತೆ ಮನವೊಲಿಸಿದರು. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದರು.
ಈ ಸಂದರ್ಭ ಪಕ್ಷದ ಸ್ಥಳೀಯ ಮುಖಂಡರು ಹಾಜರಿದ್ದರು.

error: Content is protected !!