ದಕ್ಷಿಣ ಕೊಡಗಿನಲ್ಲಿ ಬಿಜೆಪಿ ಸಭೆ : ಹಳ್ಳಿ ಜನರ ಜೀವನ ಸುಧಾರಣೆಗೆ ಕೈ ಜೋಡಿಸಿ : ಸಚಿವ ಸೋಮಣ್ಣ ಕರೆ

December 18, 2020

ಮಡಿಕೇರಿ ಡಿ.18 –  ಹಳ್ಳಿಗಾಡಿನ ಬಡಜನರ ಜೀವನ ಸುಧಾರಣೆಗೆ ಸಂಕಲ್ಪ ತೊಟ್ಟಿರುವ   ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳ ಕನಸನ್ನು ಸಾಕಾರಗೊಳಿಸಲು ನಾವೆಲ್ಲರೂ ಬದ್ಧರಾಗಿ ಪಕ್ಷವನ್ನು ಕಟ್ಟುವ ಕಾಯಕ ಮಾಡಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪಕ್ಷದ ಕಾಯ೯ಕತ೯ರಿಗೆ ಕರೆ ನೀಡಿದ್ದಾರೆ.

ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿಯಲ್ಲಿ ಆಯೋಜಿತ ಪಕ್ಷದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿ.ಸೋಮಣ್ಣ . ನಾಯಕರು ನೀಡಿರುವ ಮತ್ತು ನೀಡುವ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ಸಫಲತೆ ಪಡೆದು, ತನ್ಮೂಲಕ ಜನತೆ ನಮ್ಮ ಮೇಲಿಟ್ಟಿರುವ ನಂಬಿಕೆ ಮತ್ತು ಭರವಸೆಯನ್ನು ಉಳಿಸಿಕೊಳ್ಳಬೇಕಾಗಿದೆ. ಎಂದು ಕರೆ ನೀಡಿದರು.

ಸಂಸದ ಪ್ರತಾಪ್ ಸಿಂಹ, ಕ್ಷೇತ್ರ    ಶಾಸಕರಾದ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ  ಎಂ.ಪಿ. ಸುನಿಲ್ ಸುಬ್ರಹ್ಮಣ್ಯ,  ಬಿಜೆಪಿ ಜಿಲ್ಲಾಧ್ಯಕ್ಷ  ರಾಬಿನ್ ದೇವಯ್ಯ,  ಪಶ್ಚಿಮಘಟ್ಟ ಸಂರಕ್ಷಣಾ ನಿಗಮ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ,  ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಗೋಣಿಕೊಪ್ಪಲು ಸಭೆ –

  ಗೋಣಿಕೊಪ್ಪಲುವಿನಲ್ಲಿ  ಆಯೋಜಿಸಲಾಗಿದ್ದ  ಬಿಜೆಪಿ  ಪ್ರಮುಖರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಕ್ಷೇತ್ರ    ಶಾಸಕರಾದ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ  ಎಂ.ಪಿ. ಸುನಿಲ್ ಸುಬ್ರಹ್ಮಣ್ಯ,  ಬಿಜೆಪಿ ಜಿಲ್ಲಾಧ್ಯಕ್ಷ  ರಾಬಿನ್ ದೇವಯ್ಯ,  ಪಶ್ಚಿಮಘಟ್ಟ ಸಂರಕ್ಷಣಾ ನಿಗಮ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ,  ಹಲವಾರು ಪ್ರಮುಖರು ಉಪಸ್ಥಿತರಿದ್ದರು.

error: Content is protected !!