ಕೂಡುಮಂಗಳೂರು ಅಮರನಾಥ್ ಬಡಾವಣೆ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ

December 18, 2020

ಮಡಿಕೇರಿ ಡಿ.18 : ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಅಮರನಾಥ್ ಬಡಾವಣೆ ನಿವಾಸಿಗಳು ಈ ಬಾರಿಯ ಮತದಾನ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದಾರೆ. ಹಲವು ದಶಕಗಳ ಸಮಸ್ಯೆಯಾದ ರಸ್ತೆ, ಚರಂಡಿ ಅವ್ಯವಸ್ಥೆ, ಬೀದಿದೀಪಗಳ ಕೊರತೆ ನೀಗಿಸಲು ಪಂಚಾಯ್ತಿ ಯಾವುದೇ ಕ್ರಮಕೈಗೊಂಡಿಲ್ಲ. ಹಲವು ಬಾರಿ ಮನವಿ ಮಾಡಿದರೂ ಕೂಡ ಜನಪ್ರತಿನಿಧಿಗಳು ಬಡಾವಣೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿಲ್ಲ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.
ಬಡಾವಣೆಗೆ ಸಮರ್ಪಕ ರಸ್ತೆ, ಚರಂಡಿ ಇಲ್ಲವಾಗಿದೆ. ಮಳೆಗಾಲದಲ್ಲಿ ಸ್ಥಳೀಯ ರಸ್ತೆಗಳು ಸಂಪೂರ್ಣ ಕೆಸರುಮಯವಾಗುತ್ತಿದ್ದು ನಾಗರಿಕರಿಗೆ ಓಡಾಡಲು ಅನಾನುಕೂಲ ಉಂಟಾಗುತ್ತದೆ ಎಂದು ಸ್ಥಳೀಯರಾದ ವಾಸುದೇವ್, ಕೆಂಚಪ್ಪ, ಅನಿತಾ ಕಾರ್ಯಪ್ಪ, ಗಿರಿಜ ಜೋಯಪ್ಪ, ಲಲಿತ ವಾಸುದೇವ್ ಮತ್ತಿತರರು ಆರೋಪಿಸಿದ್ದಾರೆ

error: Content is protected !!