ಮಡಿಕೇರಿ ಸಹಕಾರ ಡಿಪ್ಲೊಮಾ ತರಬೇತಿ ಸಂಸ್ಥೆಗೆ 5 ರ‍್ಯಾಂಕ್

December 19, 2020

ಮಡಿಕೇರಿ ಡಿ.19 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಡೆಸುತ್ತಿರುವ ರಾಜ್ಯದ 8 ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಸಂಸ್ಥೆಗಳಲ್ಲಿ 2020 ನೇ ಸೆಪ್ಟೆಂಬರ್‍ನಲ್ಲಿ ನಡೆಸಲಾದ ರೆಗ್ಯೂಲರ್ ಡಿಸಿಎಂ ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ನಗರದ ತರಬೇತಿ ಸಂಸ್ಥೆಗೆ 5 ರ‍್ಯಾಂಕ್ ಪಡೆದು ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುತ್ತದೆ ಎಂದು ಸಹಕಾರ ಡಿಪ್ಲೋಮಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ.ರೇಣುಕಾ ಆರ್.ಎಸ್ ಅವರು ತಿಳಿಸಿದ್ದಾರೆ.
ಪವಿತ್ರ ಎಂ.ಬಿ 1 ನೇ ರ‍್ಯಾಂಕ್, ಇಂದುಶ್ರೀ ಪಿ. 2 ನೇ ರ‍್ಯಾಂಕ್, ಪ್ರಿಯ ಸೋಮಯ್ಯ 5 ನೇ ರ‍್ಯಾಂಕ್, ಜಯಶ್ರೀ ಎಂ.ಸಿ, 9 ನೇ ರ‍್ಯಾಂಕ್, ನಂಜುಂಡಸ್ವಾಮಿ ಎಸ್.ಬಿ.9 ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ಕೆಐಸಿಎಂ ಮಡಿಕೇರಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.

error: Content is protected !!