ಸಿದ್ದಾಪುರದಲ್ಲಿ ಎಸ್.ಕೆ ಎಸ್.ಎಸ್‌.ಎಫ್ ಅಭಿಯಾನ

20/12/2020

ಮಡಿಕೇರಿ ಡಿ.20: ಅಸ್ತಿತ್ವ ಹಕ್ಕು , ಯುವಜನಾಂಗ ಮರಳಿ ಪಡೆಯುತ್ತಿದೆ ಎಂಬ ಧ್ಯೇಯ ವಾಕ್ಯದ ಅಭಿಯಾನ ಎಸ್.ಕೆ ಎಸ್.ಎಸ್‌.ಎಫ್  ಕೇಂದ್ರ ಸಮಿತಿಯ ತೀರ್ಮಾನದಂತೆ ಕೊಡಗು ಜಿಲ್ಲಾ ವಿಖಾಯ ಸಮಿತಿಯ ನೇತೃತ್ವದಲ್ಲಿ ಸಿದ್ದಾಪುರ ಮುನವ್ವಿರುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕೊಡಗು ಜಿಲ್ಲಾ ವಿಖಾಯ ಚೇರ್ಮನ್ ಶೌಖತ್ ಅಲಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ,ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ತಮ್ಲೀಖ್ ದಾರಿಮಿ,ಪರಿಶುದ್ಧ ಇಸ್ಲಾಮಿನ ಆಚಾರ ವಿಚಾರಗಳನ್ನು ಸಮಕಾಲೀನವಾದ ಸಂದ್ಧಿಗ್ಧ ಕಾರ್ಯವೈಖರಿಗಳಲ್ಲಿ ಯಾವ ರೀತಿ ನಾವು ಮುಂದೆ ಸಾಗಬೇಕು ಎಂಬ ನೈಜ ವಿಷಯಗಳನ್ನು ಈ ಪ್ರಬುದ್ಧ ಭಾರತೀಯ ಸಂಸ್ಕೃತಿಯಲ್ಲಿ ದೇಶ ವಿದೇಶಕ್ಕೆ ಸಮರ್ಪಕವಾಗಿ  ಹೇಳಲು ಎಸ್‌.ಕೆ.ಎಸ್.ಎಸ್.ಎಫ್  ಸಂಘಟನೆ ಕಟಿಬದ್ಧವಾಗಿದೆ ಎಂದು ತಮ್ಲೀಖ್ ದಾರಿಮಿ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲೆಯಲ್ಲಿ ವಿಖಾಯ ನೀಲಂಗಿ ಪಡೆಗಳ ಕಾರ್ಯವೈಖರಿಗಳನ್ನು ಎಸ್.ಕೆ.ಎಸ್.ಎಸ್.ಎಫ್  ಕೊಡಗು ಜಿಲ್ಲಾ ಅಧ್ಯಕ್ಷರಾದ ತಮ್ಲೀಖ್ ದಾರಿಮಿ ಶ್ಲಾಘಿಸಿದರು.
     ಕಾರ್ಯಕ್ರಮದಲ್ಲಿ ಸಮೀರ್ ಸಿದ್ದಾಪುರ ಇವರ ಸಮಾಜ ಸೇವೆಯನ್ನು ಪರಿಗಣಿಸಿ ಕೊಡಗು ಜಿಲ್ಲಾ ವಿಖಾಯ ಸಮಿತಿ ವತಿಯಿಂದ ಸನ್ಮಾನಿಸಿ  ಗೌರವಿಸಲಾಯಿತು.ಕಾರ್ಯಕ್ರಮದ ಪ್ರಾರ್ಥನೆಯನ್ನು ನೆರವೇರಿಸಿ ,ಉದ್ಘಾಟನೆಯನ್ನು ಸಿದ್ದಾಪುರ ಮಹಲ್ ಖತೀಬರಾದ ನೌಫಲ್ ಹುದವಿ ನೆರವೇರಿಸಿದರು.ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆರಿಫ್ ಫೈಝಿ, ಎಸ್.ಕೆ.ಎಸ್.ಎಸ್.ಎಫ್  ಕೊಡಗು ಜಿಲ್ಲಾ ಕಾರ್ಯದರ್ಶಿ ಶುಹೈಬ್ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ವಿಖಾಯ ಕಾರ್ಯದರ್ಶಿ ಅಬ್ದುಲ್ ಬಾಸಿತ್ ಹಾಜಿ, ಸಿದ್ದಾಪುರ ಮಹಲ್ ಜಮಾಹತ್ತಿನ ಪದಾಧಿಕಾರಿಗಳು, ಕೊಡಗು ವಿಖಾಯ ಆಕ್ಟೀವ್ ವಿಂಗ್ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ವಿಖಾಯ ಕನ್ವೀನರ್ ಕರೀಂ ಮುಸ್ಲಿಯಾರ್  ಸ್ವಾಗತಿಸಿ ಇಬ್ರಾಹಿಂ ಬಾತಿಷಾ ಶಂಸಿ ವಂದಿಸಿದರು.