ವಿಶೇಷಚೇತನರ ಬಸ್‍ಪಾಸ್ ನವೀಕರಣಕ್ಕೆ ಅರ್ಜಿ ಆಹ್ವಾನ

December 21, 2020

ಮಡಿಕೇರಿ ಡಿ. 20 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಶೇಷಚೇತನರ ಬಸ್‍ಪಾಸ್ ವಿತರಣೆ/ ನವೀಕರಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸೇವಾ ಸಿಂಧು – ಪೋರ್ಟಲ್‍ನಲ್ಲಿಯೇ ಸಲ್ಲಿಸಬೇಕಾಗಿದೆ. 2020 ಸಾಲಿನಲ್ಲಿ ವಿತರಿಸಿರುವ ಬಸ್‍ಪಾಸುಗಳನ್ನು 2021 ಫೆಬ್ರವರಿ 28 ರವರೆಗೆ ಉಪಯೋಗಿಸಬಹುದು. 2020 ಡಿಸೆಂಬರ್ 26 ರಿಂದ ವಿಶೇಷಚೇತನರ ಪಾಸ್ ವಿತರಣೆ/ ನವೀಕರಣ ಪ್ರಾರಂಭವಾಗಲಿದ್ದು ಫೆಬ್ರವರಿ 28 ರೊಳಗೆ ಪಾಸ್ ಪಡೆಯಬೇಕಾಗಿ ಕೋರಲಾಗಿದೆ.
ಸೇವಾ ಸಿಂಧು ಫೋರ್ಟಲ್ serviceonline.gov.in/ karnataka/ ಅರ್ಜಿ ಸಲ್ಲಿಸಬೇಕಿದೆ ಎಂದು ಕ.ರಾ.ರ.ಸಾ.ನಿ. ಪುತ್ತೂರು ವಿಭಾಗದ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!