ಪೋರ್ಕ್ ಎಂದು ಹೇಳಲು ಹೋಗಿ ಬೀಫ್ ಆಗಿದೆ : ಬ್ರಿಜೇಶ್ ಕಾಳಪ್ಪ ಸಮರ್ಥನೆ

December 21, 2020

ಮಡಿಕೇರಿ ಡಿ.21 : “ಕೊಡವರು ಪೋರ್ಕ್ ತಿನ್ನುತ್ತಾರೆ ಎಂದು ಹೇಳಲು ಹೋಗಿ ಬಾಯಿ ತಪ್ಪಿನಿಂದ ಬೀಫ್ ಆಗಿದೆ” ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಯಿತಪ್ಪಿ ಬೀಫ್ ಎಂದು ಸಿದ್ದರಾಮಯ್ಯ ಅವರು ಹೇಳಿ ಬಿಟ್ಟಿದ್ದಾರೆ, ತಪ್ಪುಗಳು ಆಗುವುದು ಸಹಜ. ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಹಿರಂಗ ಕ್ಷಮೆಯಾಚನೆಗೆ ಎಲ್ಲಾ ಕೊಡವರು ಕೇಳುತ್ತಿಲ್ಲ, ಗ್ರಾ.ಪಂ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕೆಲವರು ಕೇಳುತ್ತಿದ್ದಾರೆ ಅಷ್ಟೇ. ಈಗಾಗಲೇ ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತಪಡಿಸಿ ಆಗಿದೆ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದರು.

error: Content is protected !!