ಕಾಯಿಮಾನಿಯಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ

December 21, 2020

ಮಡಿಕೇರಿ ಡಿ. 21 : ದಕ್ಷಿಣ ಕೊಡಗಿನ ಕುಟ್ಟ ಸಮೀಪದ ಕಾಯಿಮಾನಿ ಬಳಿಯ ಕೆರೆಯೊಂದರಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಪರಿಸರ ತಜ್ಞ ಬೋಸ್ ಮಾದಪ್ಪ ಮತ್ತು ಸತೀಶ್ ಸೆರೆಹಿಡಿದಿದ್ದಾರೆ.

ಗ್ರಾಮದ ಕಾಫಿ ಬೆಳೆಗಾರ ತೀತಿರ ಕಂಬಣ್ಣ ಎಂಬುವರಿಗೆ ಸೇರಿದ ಕೆರೆಯೊಂದರಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಕಂಬಣ್ಣ ಎಂಬವರು ಗಮನಿಸಿ ತಮ್ಮ ಮಾಲೀಕರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಂಬಣ್ಣ ಸರ್ಪವೊಂದು ನೀರಿನಲ್ಲಿ ಈಜಾಡುತ್ತಿರುವುದನ್ನು ಕಂಡು ಕೂಡಲೇ ಬೋಸ್ ಮಾದಪ್ಪ ಅವರಿಗೆ ವಿಷಯ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಬೋಸ್ ಮಾದಪ್ಪ ಅವರು, ಗೋಣಿಕೊಪ್ಪಲಿನ ಪರಿಸರ ತಜ್ಞ ಸತೀಶ್ ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕೆರೆಯೊಳಗಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸತತವಾಗಿ 3 ಗಂಟೆಯ ಪ್ರಯತ್ನದಿಂದ ಹಾವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಬ್ರಹ್ಮಗಿರಿ ವನ್ಯಜೀವಿ ವಲಯದ ಅರಣ್ಯಕ್ಕೆ ಬಿಡಲಾಯಿತು.

error: Content is protected !!