ಗೌರಮ್ಮ ದತ್ತಿ ನಿಧಿ ಪುರಸ್ಕಾರಕ್ಕೆ ಜಲಾ ಕಾಳಪ್ಪ ಕೃತಿ ‘ಮುದ್ರೆ’ ಆಯ್ಕೆ

December 21, 2020

ಮಡಿಕೇರಿ ಡಿ.21 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರತಿ ವರ್ಷ ಕೊಡಮಾಡುತ್ತಿರುವ ಕಥೆಗಾರ್ತಿ ಕೊಡಗಿನ ಗೌರಮ್ಮ ಅವರ ಹೆಸರಿನಲ್ಲಿ ಅವರ ಕುಟುಂಬಸ್ಥರು ಸ್ಥಾಪಿಸಿರುವ “ಕೊಡಗಿನ ಗೌರಮ್ಮ ದತ್ತಿ 2020ರ ಸಾಲಿನ ಪುರಸ್ಕಾರಕ್ಕೆ ಕೊಡಗಿನ ಖ್ಯಾತ ಕಾದಂಬರಿಗಾರ್ತಿ, ಕಥೆಗಾರ್ತಿ ಜಲಾಕಾಳಪ್ಪ ಅವರ ಕೃತಿ ‘ಮುದ್ರೆ’ ಆಯ್ಕೆಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ತಿಳಿಸಿದ್ದಾರೆ.
ಜಿಲ್ಲೆಯ ಹಿರಿಯ ಸಾಹಿತಿಗಳ ಪಾರದರ್ಶಕ ತೀರ್ಪಿನ ಮೂಲಕ ಕೊಡಗಿನ ಲೇಖಕಿಯರ ಆಯ್ದ ಕೃತಿಗಳಿಗೆ ಆ0iÉ್ಕು ಪ್ರಕ್ರಿಯೆ ನಡೆದಿದ್ದು, ಈ ಸಾಲಿನ ಪ್ರಶಸ್ತಿಯು ಸೋಮವಾರಪೇಟೆಯ ಕಾದಂಬರಿಗಾರ್ತಿ ಜಲಾಕಾಳಪ್ಪನವರಿಗೆ ಲಭಿಸಿದೆ.
ಮಡಿಕೇರಿ ನಗರದ ಬಾಲಭವನದಲ್ಲಿ ಡಿಸೆಂಬರ್, 24 ರಂದು ನಡೆಯುವ ಕೊಡಗಿನ ಗೌರಮ್ಮ ಅವರ ಜನ್ಮ ದಿನದಂದೇ ನಡೆಯುವ ದತ್ತಿ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವ ಸಮರ್ಪಣೆ ನೀಡಲಾಗುವುದು. ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟನೆ ಮಾಡಲಿದ್ದಾರೆ. ಪತ್ರಕರ್ತರಾದ ಅನಂತ ಶಯನ ಅವರ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ. (ಸಂಗೀತ ರವಿರಾಜ್ ರವರ ನಿರುತ್ತರ, ಕೃಪಾ ದೇವರಾಜುರವರ ಭಾವದ ಕದತಟ್ಟಿ ಕವನ ಸಂಕಲನಗಳು).

error: Content is protected !!