ಭದ್ರಗೋಳದಲ್ಲಿ ಲಾರಿ, ಬೈಕ್ ನಡುವೆ ಡಿಕ್ಕಿ : ಬೈಕ್ ಸವಾರ ಸಾವು

21/12/2020

ಮಡಿಕೇರಿ ಡಿ.21 : ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ತಿತಿಮತಿ ಗ್ರಾಮದ ಭದ್ರಗೋಳದಲ್ಲಿ ನಡೆದಿದೆ. ನೆರೆಯ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಸಿದ್ದಾರ್ಥ್(26) ಮೃತಪಟ್ಟ ಯುವಕ.
ಕೆಆರ್ ನಗರದಿಂದ ಗೋಣಿಕೊಪ್ಪ ಕಡೆಗೆ ಅಕ್ಕಿ ಸಾಗಿಸುತ್ತಿದ್ದ ಕೆಎ 09-9232 ರ ಲಾರಿಯ ಮುಂದಿನ ಚಕ್ರಕ್ಕೆ ಮೈಸೂರು ಕಡೆಗೆ ತೆರಳುತ್ತಿದ್ದ ಬೈಕ್ ಸವಾರ ಸಿದ್ದಾರ್ಥ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದ, ಈ ಸಂದರ್ಭ ಲಾರಿಯ ಹಿಂಬದಿ ಚಕ್ರ ಹರಿದು ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರೂ, ಗುರುತು ಹಿಡಿಯಲಾರದಷ್ಟು ತಲೆ ನಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕ ರಾಮರೆಡ್ಡಿ, ಉಪ ನಿರೀಕ್ಷಕ ಸುಬ್ಬಯ್ಯ ಭೇಟಿ ನೀಡಿ ಲಾರಿ ಚಾಲಕನನ್ನು ಬಂಧಿಸಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.