ನಿಯಂತ್ರಣ ತಪ್ಪಿ ಮಗುಚಿದ ವ್ಯಾನ್ : ಕೋವರ್ ಕೊಲ್ಲಿ ಜಂಕ್ಷನ್ ನಲ್ಲಿ ಘಟನೆ

21/12/2020

ಸೋಮವಾರಪೇಟೆ ಡಿ.21 : ಮಾರುತಿ ವ್ಯಾನ್ ಅವಘಡಕ್ಕೀಡಾಗಿ ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ಕೋವರ್‍ಕೊಲ್ಲಿ ಜಂಕ್ಷನ್ ಸಮೀಪ ಸೋಮವಾರ ಸಂಭವಿಸಿದೆ.
ಯಡವಾರೆ ಗ್ರಾಮ ನಿವಾಸಿ ಮಧುಕುಮಾರ್ ಎಂಬವರು ಚಾಲಿಸುತ್ತಿದ್ದ ಕಾರಿನ ಎರಡು ಟಯರ್‍ಗಳು ಪಂಕ್ಚರ್ ಆಗಿದ್ದು, ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
ಕಾರಿನ ಮುಂಭಾಗ ಜಖಂಗೊಂಡಿದ್ದು, ಚಾಲಕ ಮಧುಕುಮಾರ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.