ಭಾರತದಲ್ಲಿ ಬ್ರಿಟನ್ ವಿಮಾನಗಳ ನಿಷೇಧ

22/12/2020

ನವದೆಹಲಿ ಡಿ.22 : ಬ್ರಿಟನ್ ನಲ್ಲಿ ರೂಪಾಂತರಗೊಂಡ ಮಹಾಮಾರಿ ಕೊರೋನಾ ವೈರಸ್ ನ ಹೊಸ ಪ್ರಭೇದ ಪತ್ತೆಯಾಗಿದ್ದು, ಹಲವು ದೇಶಗಳು ಬ್ರಿಟನ್ ನಿಂದ ಬರುವ ಮತ್ತು ಹೋಗುವ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗ ಭಾರತ ಸಹ ಬ್ರಿಟನ್‍ನ ಎಲ್ಲಾ ವಿಮಾನಗಳನ್ನು ನಿಷೇಧಿಸಿದೆ.
ಬ್ರಿಟನ್ ನಲ್ಲಿ ಚಾಲ್ತಿಯಲ್ಲಿರುವ ಕೊರೋನಾ ಪರಿಸ್ಥಿತಿಯನ್ನು ಪರಿಗಣಿಸಿ ಯುಕೆ ಯಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು 2020 ಡಿಸೆಂಬರ್ 31 ರವರೆಗೆ ಸ್ಥಗಿತಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿಮಾನಯಾನ ಸಚಿವಾಲಯ ಸೋಮವಾರ ಟ್ವೀಟ್ ಮಾಡಿದೆ.
ಬ್ರಿಟನ್ ವಿಮಾನ ನಿಷೇಧ ಮಂಗಳವಾರ ರಾತ್ರಿ 11:59 ರಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ತಿಳಿಸಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ, ವಿಮಾನಗಳಲ್ಲಿ ಬ್ರಿಟನ್‍ನಿಂದ ಆಗಮಿಸುವ ಎಲ್ಲಾ ಪ್ರಯಾಣಿಕರು ಆಗಮನದ ನಂತರ ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆಗೆ ಒಳಪಡುತ್ತಾರೆ ಎಂದು ಸಚಿವಾಲಯ ಹೇಳಿದೆ.