ಕ್ರಿಸ್ಮಸ್ ಪ್ರಯುಕ್ತ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಸುಂಟಿಕೊಪ್ಪದ ಸಂತ ಅಂತೋಣಿ ದೇವಾಲಯ

December 22, 2020

ಮಡಿಕೇರಿ ಡಿ.22 : ಕ್ರಿಸ್ಮಸ್ ಹಬ್ಬದ ಅಂಗವಾಗಿ ಸುಂಟಿಕೊಪ್ಪದ ಸಂತ ಅಂತೋಣಿ ದೇವಾಲಯ ವಿದ್ಯುತ್ ದೀಪ ಹಾಗೂ ಕ್ರಿಸ್ತರ ಜನನದ ಸಂಕೇತವಾದ ನಕ್ಷತ್ರಗಳಿಂದ, ಕಂಗೊಳಿಸುತ್ತಿದೆ.
ಸಂತ ಅಂತೋಣಿ ದೇವಾಲಯವನ್ನು ಕ್ರಿಸ್‍ಮಸ್ ಹಬ್ಬವು ಸಮಿಪಿಸುತ್ತಿರುವಂತೆ ಈ ಬಾರಿ ಕರೋನಾ ಮಹಾಮಾರಿಯಿಂದ ಕ್ರೈಸ್ತ ಭಾಂದವರಲ್ಲಿ ಹಬ್ಬದ ಸಡಗರವು ಕುಂದಿದ್ದರೂ ಪ್ರಾರ್ಥನ ಸ್ಥಳವಾದ ದೇವಾಲಯವನ್ನು ವಿದ್ಯುತ್ ದೀಪ ಹಾಗೂ ನಕ್ಷತ್ರಗಳಿಂದ ಅಲಂಕಾರಗೊಳಿಸಲಾಗಿದೆ.
ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಕ್ರಿಸ್ತನ ಜನನದ ಸ್ಥಳವಾದ ದನದ ಕೊಟ್ಟಿಗೆ(ಗೋದಾಲಿ) ಹಾಗೂ ದೇವಾಲಯಗಳನ್ನು ನಕ್ಷತ್ರ ವಿದ್ಯುತ್‍ದೀಪ ಇನ್ನಿತರರ ಸಂತ ಕ್ಲಾಸ್ ಅವರನ್ನು ಒಳಗೊಂಡ ಅಲಂಕಾರಿಕ ವಸ್ತುಗಳನ್ನು ಬಳಕೆಗೊಳಿಸಿ ತಾ. 24 ರಂದು ಮದ್ಯ ರಾತ್ರಿಯಲ್ಲಿ ನಡೆಯುವ ಪ್ರಾರ್ಥನಾಕೂಟಕ್ಕೆ ಅಣಿಗೊಳಿಸಲಾಗಿದೆ.

error: Content is protected !!