ನಕ್ಸಲ್ ಪೀಡಿತ ಮತಗಟ್ಟೆಗೆ ಬಿಗಿ ಭದ್ರತೆ

ಮಡಿಕೇರಿ ಡಿ.23 : ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕುವಾರು ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಮತಗಟ್ಟೆಗಳನ್ನು ಗುರುತು ಮಾಡಲಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ 45 ಸೂಕ್ಷ್ಮ, 6 ಅತೀ ಸೂಕ್ಷ್ಮ, 8 ನಕ್ಸಲ್ ಪೀಡಿತ ಮತ್ತು 80 ಸಾಮಾನ್ಯ ಮತಗಟ್ಟೆಗಳೆಂದು ಗುರುತು ಮಾಡಲಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ 48 ಸೂಕ್ಷ್ಮ, 24 ಅತೀ ಸೂಕ್ಷ್ಮ, 154 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿತ್ತು. ನಕ್ಸಲ್ ಪೀಡಿತ ಮತಗಟ್ಟೆಗೆ ಕೊಡಗು ಜಿಲ್ಲಾ ಶಸ್ತ್ರ ಸಜ್ಜಿತ ಪೊಲೀಸ್ ಕಮಾಂಡೋಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಇನ್ನುಳಿದಂತೆ ಮತಗಟ್ಟೆಯ ಸ್ಥಿತಿಗತಿಗಳನ್ನು ಆಧರಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತಲ್ಲದೇ, ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನೂ ಕೂಡ ನಿಯೋಜನೆ ಮಾಡಲಾಗಿತ್ತು. ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಗ್ರಾಮಸ್ಥರು ಯಾವುದೇ ಭಯವಿಲ್ಲದೇ ಬೆಳಗಿನಿಂದಲೇ ಮತ ಚಲಾಯಿಸಿದ್ದು ಕಂಡು ಬಂತು. ಜಿಲ್ಲೆಯ ಇತರ ಮತಗಟ್ಟೆಗಳಿಗೆ ಹೋಲಿಸಿದರೆ ಈ ಬೂತ್ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದು ವಿಶೇಷವಾಗಿತ್ತು.
