ಚೆಟ್ಟಳ್ಳಿಯಲ್ಲಿ ಶಾಂತಿಯುತ ಮತದಾನ

23/12/2020

ಮಡಿಕೇರಿ ಡಿ.23 : ಗ್ರಾಮ ಪಂಚಾಯತಿ ಚುನಾವಣೆ ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರು ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಿದೆ.
ಆರು ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಮತಗಟ್ಟೆಗಳಲ್ಲಿ ,ಮತದಾರರು ತಾ ಮುಂದು ನಾ ಮುಂದು ಎಂದು ಮತದಾನ ಮಾಡುವಲ್ಲಿ ಆಸಕ್ತಿ ತೋರಿದ್ದರು. ಮಧ್ಯಾಹ್ನ 12 ಗಂಟೆಯ ನಂತರ ಮಂದಗತಿಯಲ್ಲಿ ಮತದಾನ ಪ್ರಕ್ರಿಯೆ ಕಂಡು ಬಂತು.ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಟ್ಟು ಆರು ಮತಗಟ್ಟೆಗಳು ಸೇರಿ ಒಟ್ಟು ಶೇಕಡಾ 72% ರಷ್ಟು ಮತದಾನ ನಡೆದಿದೆ.

ಕಾಫಿಬೋರ್ಡ್ ಕ್ಷೇತ್ರದಲ್ಲಿ 225 ಪುರುಷ ಹಾಗೂ 252 ಮಹಿಳಾ ಮತದಾರರು ಸೇರಿ 477 ಮತದಾರರು ಮತ ಚಲಾಯಿಸಿದ್ದಾರೆ.ಒಟ್ಟು ಶೇಕಡಾ 70 ರಷ್ಟು ಮತದಾನ ನಡೆದಿದೆ. ಪೊನ್ನತ್ಮೊಟ್ಟೆ ಕ್ಷೇತ್ರದಲ್ಲಿ 284 ಮಹಿಳೆಯರು ಹಾಗೂ 311 ಸೇರಿ 595 ಮತದಾರರು ಮತ ಚಲಾಯಿಸಿದ್ದಾರೆ. ಶೇಕಡ 71 ರಷ್ಟು ಮತದಾನ ನಡೆದಿದೆ.

ಕಂಡಕರೆ ಕ್ಷೇತ್ರದಲ್ಲಿ 313 ಮಹಿಳೆಯರು ಹಾಗೂ 295 ಪುರುಷರು ಸೇರಿ 608 ಮತದಾರರು ಮತ ಚಲಾಯಿಸಿದ್ದಾರೆ.ಶೇಕಡಾ 74 ರಷ್ಟು ಮತದಾನ ನಡೆದಿದೆ. ಚೆಟ್ಟಳ್ಳಿ ಟೌನ್ ಕ್ಷೇತ್ರದಲ್ಲಿ 301 ಮಹಿಳೆಯರು ಹಾಗೂ 288 ಪುರುಷರು ಸೇರಿ ಒಟ್ಟು 589 ಮತದಾರರು ಮತ ಚಲಾಯಿಸಿದ್ದಾರೆ. ಶೇಕಡಾ 68 ರಷ್ಟು ಮತದಾನ ನಡೆದಿದೆ.

ಕೂಡ್ಲೂರು ಚೆಟ್ಟಳ್ಳಿ (ಮಲಕೋಡು) ಕ್ಷೇತ್ರದಲ್ಲಿ 301 ಮಹಿಳೆಯರು ಹಾಗೂ 288 ಪುರುಷರು ಸೇರಿ ಒಟ್ಟು 589 ಮತದಾರರು ಮತ ಚಲಾಯಿಸಿದ್ದು,ಶೇಕಡಾ 78 ರಷ್ಟು ಮತದಾನ ನಡೆದಿದೆ.

ಈರಳವಳಮುಡಿ ಕ್ಷೇತ್ರದಲ್ಲಿ 146 ಮಹಿಳೆಯರು ಹಾಗೂ 135 ಪುರುಷರು ಮತ ಚಲಾಯಿಸಿದ್ದು,ಒಟ್ಟು 281ಮತದಾರರು ಮತ ಚಲಾಯಿಸಿದ್ದಾರೆ. ಶೇಕಡಾ 71 ರಷ್ಟು ಮತದಾನ ನಡೆದಿದೆ.
ಮತದಾನ ಸಂದರ್ಭ ಪೊಲೀಸ್ ಇಲಾಖೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಿದ್ದರು.