ಎಂಟೆಕ್ ಇನ್ ಟೂಲ್ ಇಂಜಿನೀಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನ

December 23, 2020

ಮಡಿಕೇರಿ ಡಿ.23 : ಮೈಸೂರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2020-21ನೇ ಸಾಲಿನ ಎಂ.ಟೆಕ್ ಇನ್ ಟೂಲ್ ಇಂಜೀನಿಯರಿಂಗ್ ಕೋರ್ಸಗೆ ಪಿಜಿಸಿಇಟಿ ಬರೆದ ಬಿ.ಇ., ಮೆಕ್ಯಾನಿಕಲ್/ ಇಂಡಸ್ಟ್ರೀಯಲ್ ಪ್ರೋಡಕ್ಷನ್/ ಆಟೋ ಮೊಬೈಲ್/ಮೇರಿನ್/ಆಟೋಮೇಷನ್ ಮತ್ತು ರೋಬೋಟಿಕ್ಸ್ ಇಂಜಿನಿಯರಿಂಗ್ ಮುಂತಾದವುಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಎಐಸಿಟಿಇ ಮತ್ತು ವಿಟಿಯು ಇಂದ ಅನುಮೋದನೆ ಪಡೆದ ಎರಡು ವರ್ಷ ಅವಧಿಯ ಎಂಟೆಕ್ ಇನ್ ಟೂಲ್ ಇಂಜಿನೀಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಜಿಟಿಟಿಸಿಯಲ್ಲಿ ನೀಡುವ ತರಬೇತಿಯು ಬೇರೆ ಸಾಂಪ್ರದಾಯಿಕ ತರಬೇತಿಗಿಂತ ಭಿನ್ನವಾಗಿದ್ದು ಪ್ರಾಯೋಗಿಕ ತರಬೇತಿ ಪಡೆಯುವುದಲ್ಲದೆ ದಿನದಿಂದ ದಿನಕ್ಕೆ ಬದಲಾಗುವ ತಂತ್ರಜ್ಞಾನದಲ್ಲಿ ಪರಿಣತಿ ಮತ್ತು ಅನುಭವ ಪಡೆಯಲು ಸಾಧ್ಯವಾಗಿರುತ್ತದೆ. ಈ ಸಂಸ್ಥೆಯಲ್ಲಿ ಕೈಗಾರಿಕಾ ಘಟಕವಿರುವುದರಿಂದ ವಿದ್ಯಾರ್ಥಿಗಳಿಗೆ ಸಿಎನ್‍ಸಿ ಯಂತ್ರದಲ್ಲಿ ಕೆಲಸ ಮಾಡಬಹುದಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ನಿಯಮಿತ ಬೋಧನಾ ಚಟುವಟಿಕೆಗಳ ಜೊತೆಗೆ ಕೈಗಾರಿಕೆಯ ಅನುಭವ ದೊರೆಯುವುದು. ಈ ಸಂಸ್ಥೆಯಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಸ್ವಉದ್ಯೋಗಿ/ಉದ್ಯೋಗಿಯಾಗಲು ನಮ್ಮ ಶಿಕ್ಷಣ ಸಹಕಾರಿಯಾಗುತ್ತದೆ ಮತ್ತು ಹೆಸರಾಂತ ಕೈಗಾರಿಕೆಗಳಲ್ಲಿ ಅತ್ಯುತ್ತಮವಾದ ಉದ್ಯೋಗಾವಕಾಶಗಳು ಲಭ್ಯವಾಗುತ್ತದೆ.
ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ದೇಶ, ವಿದೇಶದ ವಿವಿಧ ಕೈಗಾರಿಕೆಗಳಲ್ಲಿ ಬಹಳ ಬೇಡಿಕೆ ಇದೆ. ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಇನ್ಫೋಸಿಸ್, ಟಿಸಿಎಸ್, ಬೋಷ್, ಟೋಯೊಟಾ ಮುಂತಾದ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯ ವತಿಯಿಂದ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ.93 ಮತ್ತು 94, ಬೆಳಗೊಳ ಕೈಗಾರಿಕಾ ಪ್ರದೇಶ, ಕೆಆರ್‍ಎಸ್ ರಸ್ತೆ, ಮೈಸೂರು–16. ಮೊಬೈಲ್ ನಂ : 9243989954 ನ್ನು ಸಂಪರ್ಕಿಸಬಹುದು ಎಂದು ಮೈಸೂರು, ಜಿಟಿಟಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ.

error: Content is protected !!