ಸಿಬಿಎಸ್‍ಇ ಪರೀಕ್ಷೆಗಳು ನಡೆಯಲ್ಲ

December 23, 2020

ನವದೆಹಲಿ ಡಿ.23 : ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಹಿನ್ನಲೆಯಲ್ಲಿ 2021ರ ಫೆಬ್ರವರಿ ವರೆಗೂ ಸಿಬಿಎಸ್‍ಇ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೆÇೀಕ್ರಿಯಾಲ್ ನಿಶಾಂಕ್ ಹೇಳಿದ್ದಾರೆ.
ರಮೇಶ್ ಪೆÇೀಕ್ರಿಯಾಲ್ ನಿಶಾಂಕ್ ಅವರು ಇಂದು ದೇಶಾದ್ಯಂತ ಶಿಕ್ಷಕರೊಂದಿಗೆ ಸಂವಾದ ವೆಬಿನಾರ್ ಸಂವಾದ ನಡೆಸಿದರು. ಸಂವಾದದ ಸಂದರ್ಭದಲ್ಲಿ, ಶಿಕ್ಷಣ ಸಚಿವರು ಜನವರಿ ಮತ್ತು ಫೆಬ್ರವರಿಯಲ್ಲಿ ಯಾವುದೇ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಎಂದು ಹೇಳಿದರು.
‘ಮುಂದಿನ ವರ್ಷ ಅಂದರೆ 2021ರ ಫೆಬ್ರವರಿ ತನಕ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಮತ್ತು ಪರೀಕ್ಷೆಯ ವೇಳಾಪಟ್ಟಿಯ ಬಗ್ಗೆ ಆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ಜನವರಿಯಿಂದ ಶಾಲಾ-ಕಾಲೇಜುಗಳ ಪುನಾರಂಭ ಮಾಡಲು ಶಿಕ್ಷಣ ಸಂಸ್ಥೆಗಳು ಸಿದ್ಧತೆ ನಡೆಸುತ್ತಿವೆ ಎಂದು ಹೇಳಿದರು.

error: Content is protected !!