ರೂಪಾಂತರಿ ವೈರಸ್ ಭಾರತದಲ್ಲಿಲ್ಲ

December 23, 2020

ನವದೆಹಲಿ ಡಿ.23 : ಬ್ರಿಟನ್ ನಲ್ಲಿ ಪತ್ತೆಯಾದ ಎಸ್‍ಎಆರ್‍ಎಸ್-ಕೋವಿ -2 ರೂಪಾಂತರಿ ಕೊರೋನಾ ವೈರಸ್ ಬಗ್ಗೆ ಯಾವುದೇ ಆತಂಕ ಅಥವಾ ಭೀತಿ ಬೇಡ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್‍ಐಟಿಐ ಆಯೋಗದ ಸದಸ್ಯ(ಆರೋಗ್ಯ) ಡಾ.ವಿ.ಕೆ.ಪಾಲ್, ಭಾರತದಲ್ಲಿ ರೂಪಾಂತರಿತ ಕೊರೋನಾವೈರಸ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಬ್ರಿಟನ್ ನಲ್ಲಿ ಪತ್ತೆಯಾದ ರೂಪಾಂತರಿತ ಎಸ್‍ಎಆರ್‍ಎಸ್-ಕೋವಿ -2 ಅಭಿವೃದ್ಧಿ ಪಡಿಸಿರುವ ಲಸಿಕೆಗಳ ಸಾಮಥ್ರ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಲಭ್ಯವಿರುವ ದತ್ತಾಂಶ, ಆಳವಾದ ತಿಳುವಳಿಕೆ ಮತ್ತು ನಮ್ಮ ಆಳವಾದ ಮೌಲ್ಯಮಾಪನದ ಆಧಾರದ ಮೇಲೆ, ರೂಪಾಂತರಿತ ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಇದು ಹೆಚ್ಚು ಜಾಗರೂಕರಾಗಿರಲು ಒಂದು ಕಾರಣವಾಗಿದೆ. ಈ ಹೊಸ ಸವಾಲನ್ನು ನಾವು ನಮ್ಮ ಸಮಗ್ರ ಪ್ರಯತ್ನಗಳ ಮೂಲಕ ಎದುರಿಸಬೇಕಾಗಿದೆ. ಕೊವೀಡ್ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸಿ ಎಂದು ಪಾಲ್ ಹೇಳಿದರು.
ಈ ರೂಪಾಂತರಿತ ವೈರಸ್ ಗೆ ಚಿಕಿತ್ಸೆಯ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇನ್ನು ಮುಖ್ಯವಾಗಿ ದೇಶದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.
ರೂಪಾಂತರಿತ ವೈರಸ್ ಹೆಚ್ಚು ಸಾಂಕ್ರಾಮಿಕವಾಗಬಹುದು. ಇನ್ನು ಇದು ಜನರಲ್ಲಿ ಸುಲಭವಾಗಿ ಹರಡಬಹುದು ಎಂದು ಪಾಲ್ ಹೇಳಿದರು.

error: Content is protected !!