ಭ್ರಷ್ಟಾಚಾರವನ್ನು ಅಲ್ಲಗಳೆದ ಅಬಕಾರಿ ಸಚಿವ

23/12/2020

ಬೆಂಗಳೂರು ಡಿ.22 : ತಮ್ಮ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಕ್ಕೆ ಅಬಕಾರಿ ಸಚಿವರೂ ಆಗಿರುವ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸ್ಪಷ್ಟನೆ ನೀಡಿದ್ದು, ತಾವು ಭ್ರಷ್ಟಾಚಾರಿ ಅಲ್ಲ. ಯಾವುದೇ ಲಂಚ ತೆಗದುಕೊಂಡಿಲ್ಲ. ಶ್ರೀಕ್ಷೇತ್ರ ಧರ್ಮಸ್ಥಳ ಸೇರಿದಂತೆ ಎಲ್ಲಿ ಬೇಕಾದರೂ ಬಂದು ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ತಮಗೆ ಯಾರೂ ಸಹ ಬಲಗೈ ಬಂಟ ಇಲ್ಲ. ಮಂಜುನಾಥ್ ಹಾಗೂ ಹರ್ಷ ಯಾರೂ ಎಂಬುದು ಗೊತ್ತಿಲ್ಲ. ಮಂಜುನಾಥ್ ಹಾಗೂ ಹರ್ಷ ಕೋಲಾರದ ವಾಸಿಗಳಷ್ಟೆ. ಅವರ ಬಗ್ಗೆ ತಮಗೆ ಮಾಹಿತಿಯಿಲ್ಲ. ಅಬಕಾರಿ ಇಲಾಖೆಯಲ್ಲಿ ಮೋಹನ್ ಕುಮಾರ್ ಭ್ರಷ್ಟಾಚಾರಿಯಾಗಿದ್ದು, ಮೋಹನ್ ಕುಮಾರ್ ಪುತ್ರಿ ಸ್ನೇಹ ಇದೆಲ್ಲಾ ಮಾಡುತ್ತಿದ್ದಾರೆ. ಅಧಿಕಾರಿ ಮೋಹನ್ ಕುಮಾರ್ ಮಾನಸಿಕ ಅಸ್ವಸ್ಥರಿದ್ದಾರೆ. ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದು, ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳುತ್ತಿದ್ದು, ಈಗಾಗಲೇ ಇಲಾಖೆ ತನಿಖೆಗೆ ಆದೇಶ ಮಾಡಿದ್ದೇನೆ ಎಂದರು