ಕೊಡವ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

23/12/2020

ಮಡಿಕೇರಿ ಡಿ. 23 : ಶೈಕ್ಷಣಿಕ ವರ್ಷ 2020-21ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ ಮತ್ತು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಸಲಾಗುವ ಕೊಡವ ಸರ್ಟಿಫಿಕೇಟ್ ಮತ್ತು ಡಿಪೆÇ್ಲೀಮಾ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು,
ಅರ್ಜಿ ಸಲ್ಲಿಸಲು ಜ. 4 ಕೊನೆಯ ದಿನವಾಗಿದೆ.
ಪ್ರವೇಶಾತಿ ಅರ್ಜಿ ಶುಲ್ಕ ರೂ. 100 (ಪ.ಜಾ/ ಪ.ಪಂ/ ಪ್ರವರ್ಗ-1 : ರೂ.50). ಅರ್ಜಿ ಶುಲ್ಕವನ್ನು ಚಲನ್ ಅಥವಾ ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ ಇವರ ಹೆಸರಿನಲ್ಲಿ ಡಿ.ಡಿ. ಪಡೆಯುವುದು, ವಿಶ್ವವಿದ್ಯಾನಿಲಯ ಜಾಲತಾಣದಲ್ಲಿ ಲಭ್ಯವಿರುವ Online link ನ Term fee for PG department002 and point 14 Application fee ಬಳಸಿ ಶುಲ್ಕ ಪಾವತಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧ್ಯಕ್ಷರು,ಸಂಯೋಜಕರು, ಪ್ರಾಂಶುಪಾಲರಿಗೆ ಸಲ್ಲಿಸುವುದು, ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳನ್ನು www.mangaloreuniversity.ac.in ನಲ್ಲಿ ಪಡೆಯಬಹುದು.